Saturday, November 23, 2024
ಸುದ್ದಿ

ಪುತ್ತೂರಿನ ಬಿಂದು ಶಂಕರ್ ಭಟ್ 2018ನೇ ಸಾಲಿನ ವರ್ಷದ ಕನ್ನಡಿಗ – ಕಹಳೆ ನ್ಯೂಸ್

ಪುತ್ತೂರು : ಪನೋರಮ ಟೆಲಿವಿಷನ್ ಪ್ರೈ.ಲಿ. ನ್ಯೂಸ್18 ಕನ್ನಡ ಚಾನೆಲ್ ಕೊಡಮಾಡುವ ಪ್ರತಿಷ್ಠಿತ ‘ವರ್ಷದ ಕನ್ನಡಿಗ- 2018’ ಪ್ರಶಸ್ತಿಗೆ ‘ಉದ್ದಿಮೆ’ ಕ್ಷೇತ್ರದಲ್ಲಿ ಬಿಂದು ಖ್ಯಾತಿಯ ಪುತ್ತೂರಿನ ಎಸ್.ಜಿ ಕಾರ್ಪರೇಟ್ಸ್ ಕಂಪನಿಯ ಮಾಲಕರಾದ ಶ್ರೀ ಸತ್ಯಶಂಕರ್ ಕೆ.ಯವರ ಪಾಲಿಗೆ ಒಲಿದಿದೆ.ಸತ್ಯಶಂಕರ ತಂಪು ಪಾನೀಯದ ಉದ್ಯಮದಲ್ಲಿ ಏರಿರುವ ಎತ್ತರ ಸೋಜಿಗಗೊಳಿಸುವಂಥದ್ದು. ‘ಬಿಂದು’ ಎಂಬ ಹೆಸರಿನ ತಮ್ಮ ಕಂಪನಿಯ ಪೇಯ ಈಗಾಗಲೇ ಇಡೀ ರಾಜ್ಯದಲ್ಲಿ ಮನೆಮತಾಗಿರುವುದು ಸುಳ್ಳಲ್ಲ. ಬಹುರಾಷ್ಟ್ರಿಯ ದೈತ್ಯ ಕಂಪೆನಿಗಳನ್ನೆದುರಿಸಿ ಗ್ರಾಮೀಣ ಭಾಗದ ಉದ್ಯಮವೊಂದು ಈ ಮಟ್ಟಕ್ಕೆ ಬೆಳೆಯುವುದು ನಿಜಕ್ಕೂ ಸವಾಲಿನ ಕೆಲಸ. ತೀರಾ ಸಾಧಾರಣ ಹಿನ್ನಲೆಯಿಂದ ಬಂದು ಸಂಕಷ್ಟಗಳ ಸರಮಾಲೆಗಳನ್ನೇ ಎದುರಿಸಿ ತಾವು ಸಾಧಿಸಿರುವ ಈ ಯಶಸ್ಸು ಸದಾ ಸರ್ವರಿಗೂ ಸ್ಪೂರ್ತಿದಾಯಕ. ನೀವು ಕನ್ನಡದ ಕನ್ನಡಿಗರ ಹೆಮ್ಮೆ ಎಂದು ಪ್ರಶಸ್ತಿ ಫಲಕ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಪುರುಷರಕಟ್ಟೆಯಲ್ಲಿ ತಯಾರಿಕ ಘಟಕ ಹೊಂದಿರುವ ಎಸ್‍ಜಿ ಕಾರ್ಪೋರೇಟ್ಸ್, ಇತ್ತಿಚೆಗೆ ತೆಲಂಗಾಣದಲ್ಲೊಂದು ತಯಾರಿಕ ಘಟಕ ಸ್ಥಾಪಿಸಿದೆ.
ಕನ್ನಡ ನಟ ಶ್ರೀಮುರಳಿ, ನ್ಯೂಸ್ 18 ಸಂಪಾದಕ ಅನಂತ ಚಿನಿವಾರ್ ಉಪಸ್ಥಿತಿಯಲ್ಲಿ ಸತ್ಯಶಂಕರ್‍ರವರಿಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ನ್ಯೂಸ್ 18 ನಡೆಸಿಕೊಡುವ ವರ್ಷದ ಕನ್ನಡಿಗ ಪ್ರಶಸ್ತಿಯ ಆಯ್ಕೆ ಸಮಿತಿ ತೀರ್ಪುಗಾರರಾಗಿ ಇನ್ಪೋಸಿಸ್ ಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ, ಡಾ.ಸಿ.ಎನ್ ಮಂಜುನಾಥ್, ಕರ್ನಾಟಕ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಉಲ್ಲಾಸ್ ಕಾರಂತ್, ಶ್ರದ್ದಾ ಶ್ರೀನಾಥ್, ಎಂ.ಡಿ.ಪಲ್ಲವಿ, ಹೇಮಮಾಲಿನಿ ಮಯ್ಯ ಭಾಗವಹಿಸಿದ್ದರು.