Recent Posts

Friday, November 22, 2024
ಬೆಳ್ತಂಗಡಿ

ಎಲ್.ಐ.ಸಿ ಗೋಲ್ಡನ್ ಜುಬ್ಲೀ ಫೌಂಡೇಶನ್ ವತಿಯಿಂದ ನಡೆಯುತ್ತಿರುವ 101 ಕೋಟಿ ರೂಪಾಯಿಗಳ ಸೇವಾಕಾರ್ಯ ಚಟುವಟಿಕೆಗಳನ್ನು ವಿವರಿಸಿದ ಎಲ್.ಐ.ಸಿಯ ರೀಜನಲ್ ಮ್ಯಾನೇಜರ್ ಎಮ್. ಜಗನ್ನಾಥ್ – ಕಹಳೆ ನ್ಯೂಸ್

ಸೌತಡ್ಕ : ಸೇವಾಭಾರತೀಯ ಅಂಗಸಂಸ್ಥೆಯಾದ ಸೇವಾಧಾಮದಲ್ಲಿ ಎಲ್.ಐ.ಸಿ ಗೋಲ್ಡನ್ ಜುಬ್ಲೀ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡಿದ ಸೋಲಾರ್ ಪ್ಯಾನಲ್ ಹಾಗೂ ವಾಟರ್ ಹೀಟರ್ ಉದ್ಘಾಟನ ಸಮಾರಂಭವು ನೆರವೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕರ್ನಾಟಕದ ಎಲ್.ಐ.ಸಿಯ ರೀಜನಲ್ ಮ್ಯಾನೇಜರ್ ಎಮ್.ಜಗನ್ನಾಥ್ ಅವರು ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತಾಡಿದ ಎಮ್. ಜಗನ್ನಾಥ್ ಎಲ್.ಐ.ಸಿ ಗೋಲ್ಡನ್ ಜುಬ್ಲೀ ಫೌಂಡೇಶನ್ ವತಿಯಿಂದ ನಡೆಯುತ್ತಿರುವ 101 ಕೋಟಿ ರೂಪಾಯಿಗಳ ಸೇವಾಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಮುಂದೆ ಕೂಡ ಎಲ್.ಐ.ಸಿ ಫೌಡೇಶನ್ ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಭರವಸೆ ಇದೆ ಎಂದರು. ಉಡುಪಿಯ ಸೀನಿಯರ್ ಡಿವಿಷನ್ ಮ್ಯಾನೇಜರ್ ಶ್ರೀಮತಿ ಬಿಂದು ರಾಬರ್ಟ್ ರವರು ಮಾತನಾಡಿ ಸೇವಾಧಾಮದ ಸೇವಾಕಾರ್ಯ ಮೆಚ್ಚುಗೆ ವ್ಯಕ್ತ ಪಡಿಸಿ, ಎಲ್.ಐ.ಸಿ ಯಿಂದ ಸಿಗುವ ಸೇವಾ ಸೌಕರ್ಯ, 10ನೇ ಹಾಗೂ ಪಿಯುಸಿಯವರಿಗೆ ಸಿಗುವ ಸ್ಕಾಲರ್‍ಶಿಪ್ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಸೇವಾಭಾರತೀಯ ಅಧ್ಯಕ್ಷ ಕೆ.ವಿನಾಯಕ ರಾವ್ ಮಾತನಾಡಿ ಸೇವಾಧಾಮಕ್ಕೆ ಸೋಲಾರ್ ಪ್ಯಾನಲ್ ಹಾಗೂ ವಾಟರ್ ಹೀಟರ್ಗಳನ್ನು ಕೊಡುಗೆಯಾಗಿ ನೀಡಿದ್ದಕ್ಕೆ ಎಲ್.ಐ.ಸಿ ಸಂಸ್ಥೆಗೆ ಹಾಗೂ ಪ್ರತಿನಿಧಿಗಳಿಗೆ ಧನ್ಯವಾದ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಎಮ್. ಜಗನ್ನಾಥ್, ಉಡುಪಿಯ ಸೀನಿಯರ್ ಡಿವಿಷನ್ ಮ್ಯನೇಜರ್ ಶ್ರೀಮತಿ ಬಿಂದು ರಾಬರ್ಟ್, ಉಡುಪಿಯ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ವಿ. ಶಿರೂರ್, ಬಂಟ್ವಾಳದ ಚೀಫ್ ಮ್ಯಾನೇಜರ್ ಶ್ರೀ ಪಿ.ಸಿ ನಾಯಕ್ ಮತ್ತು ಉಡುಪಿಯ ಹೆಲ್ತ್ ಇನ್ಸೂರೆನ್ಸ್ ಮ್ಯಾನೇಜರ್ ಶ್ರೀ ಎ. ಮೋಹನ್ ದಾಸ್, ಬೆಳ್ತಂಗಡಿಯ ಬ್ರಾಂಚ್ ಮ್ಯಾನೇಜರ್ ಶ್ರೀ ದೇವಪ್ಪ ನಾಯಕ್ ಪಿ, ಬೆಳ್ತಂಗಡಿಯ ಡೆವಲಪ್ಮೆಂಟ್ ಆಫೀಸರ್ ಶ್ರೀ ಉದಯ ಶಂಕರ್, ಶ್ರೀ ವಿನಾಯಕ ಸೇವಾ ಟ್ರಸ್ಟ್, ಸೌತಡ್ಕದ ಅಧ್ಯಕ್ಷ ಶ್ರೀ ಕೃಷ್ಣಾ ಭಟ್, ಮತ್ತು ಸೇವಾ ಭಾರತೀಯ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕ ಶ್ರೀ ಕೆ.ವಿನಾಯಕ ರಾವ್, ಸೇವಾಧಾಮದ ಸಂಚಾಲಕ ಶ್ರೀ ಕೆ.ಪುರಂದರ ರಾವ್, ಸೇವಾ ಭಾರತಿಯ ಕಾರ್ಯದರ್ಶಿ ಸ್ವರ್ಣಗೌರಿ, ಸೇವಾಭಾರತೀಯ ಟ್ರಸ್ಟಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು