Recent Posts

Monday, January 20, 2025
ಬಂಟ್ವಾಳ

ಸತೀಶ್ ರವರ ವಾರದ ಮೂರು ಬಾರಿಯ ಡಯಾಲೀಸ್ ಚಿಕಿತ್ಸೆಗೆ ಬೇಕಾಗಿದೆ ದಾನಿಗಳ ನೆರವು – ಕಹಳೆ ನ್ಯೂಸ್

ಬಂಟ್ವಾಳ: ಪಾಣೆಮಂಗಳೂರಿನ ಮೊಗರ್ನಾಡು ನಿವಾಸಿ 47 ವರ್ಷದ ಸತೀಶ್ ಅವರ ಕುಟುಂಬವು ಚಿಂತಾಜನಕ ಸ್ಥಿತಿಯಲ್ಲಿದೆ. ಮೆಲ್ಕಾರಿನ ಹೋಟೆಲೊಂದರಲ್ಲಿ ದುಡಿಯುತ್ತಿದ್ದ ಇವರು ಸುಖೀ ಜೀವನ ನಡೆಸುತ್ತಿದ್ದರು. ವಿಧಿಯಾಟವೋ ಏನೋ ಎಂಬ೦ತೆ ಏಕಾಏಕಿ ಇವರ ಎರಡು ಕಿಡ್ನಿ ವೈಫಲ್ಯದಿಂದ ಖಾಯಿಲೆಗೆ ತುತ್ತಾಗಿ ಇಡೀ ಕುಟುಂಬದ ಆಧಾರವೇ ನೆಲಕ್ಕುರುಳಿದಂತಾಗಿದೆ. ವಾರಕ್ಕೆ ಮೂರು ಬಾರಿ ಡಯಾಲಿಸೀಸ್ ಚಿಕಿತ್ಸೆ ಮಾಡಬೇಕಾಗಿದೆ. ಈ ಪರಿಸ್ಥಿತಿಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಇವರ ಕುಂಟು೦ಬ, ದುಬಾರಿ ಖರ್ಚಿನ ಈ ಡಯಾಲಿಸೀಸ್ ಚಿಕಿತ್ಸೆಗೆ ದಾನಿಗಳ ನೆರವಿಗೆ ಕೈಯಾಚಿಸಿದೆ.


ಇವರ ಮನೆಯಲ್ಲಿ ಸತೀಶ್ ಹಿರಿಯಾರಾಗಿದ್ದು. ಇವರಿಗೆ ಇಬ್ಬರು ತಮ್ಮಂದಿರು ಮತ್ತು ಒಂದು ತಂಗಿ ಸೇರಿ ನಾಲ್ವರು ಮನೆಯಲ್ಲಿದ್ದರೆ. ಇಬ್ಬರು ತಮ್ಮಂದಿರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದು, ಸಧ್ಯದ ಪರಿಸ್ಥಿತಿಯಲ್ಲಿ ಮನೆಯ ಖರ್ಚು ಹಾಗೂ ಅಣ್ಣನ ಔಷಧಿಗೆ ಇವರ ದುಡಿಮೆ ಸಾಲುತ್ತಿಲ್ಲ. ಸತೀಶ್ ಅವರಿಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ವಾರಕ್ಕೆ ಮೂರು ಡಯಾಲಿಸೀಸ್ ಚಿಕಿತ್ಸೆ ಆಗಬೇಕಿದ್ದು, ಒಂದು ಚಿಕಿತ್ಸೆಗೆ ೧೨೦೦ ರೂ. ಬೇಕಾಗುತ್ತದೆ. ಜತೆಗೆ ಹೋಗಿ ಬರುವ ಖರ್ಚು ಪ್ರತ್ಯೇಕವಾಗಿದ್ದು, ಸಣ್ಣಪುಟ್ಟ ಖರ್ಚಿಗೂ ಪರದಾಡುತ್ತಿದ್ದರೆ ಅವರ ಅನಾರೋಗ್ಯದ ಶಾಶ್ವತ ಪರಿಹಾರಕ್ಕೆ ಲಕ್ಷಾಂತರ ರೂಪಾಯಿ ಬೇಕಿರುವುದರಿಂದ ದಿಕ್ಕುತೋಚದ ಸ್ಥಿತಿಯಲ್ಲಿ ದಿನ ನೂಕುತ್ತಿದ್ದರೆ. ಪ್ತಸ್ತುತ ಡಯಾಲೀಸ್ ಚಿಕಿತ್ಸೆಗಾದರು ಅನುಕೂಲವಾಗಲಿ ಎಂದು ಸಹೃದಯಿ ದಾನಿಗಳಲ್ಲಿ ನೆರವನ್ನು ಕೋರುತ್ತಿದ್ದರೆ.  ನೆರವು ನೀಡುವ ದಾನಿಗಳು ಸತೀಶ್ ಅವರ ಹೆಸರಿನಲ್ಲಿ ಕೆನರಾ(ಸಿಂಡಿಕೇಟ್) ಬ್ಯಾಂಕ್ ಶಂಭೂರು ಶಾಖೆಯ ಖಾತೆ ಸಂಖ್ಯೆ 02942610003616 ((IFSC-SYNB0000294)) ಗೆ ತಮ್ಮ ನೆರವು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅವರ ಮೊ. ಸಂಖ್ಯೆ 6363377405 ಯನ್ನು ಸಂಪರ್ಕಿಸಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು