Recent Posts

Monday, January 20, 2025
ಹೆಚ್ಚಿನ ಸುದ್ದಿ

ಗೋಮಾಂಸದ ಸಂಬಂಧ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕುತ್ತೇವೆ;ಪಶು ಪಾಲನಾ ಇಲಾಖೆ ಸಚಿವ ಪ್ರಭು ಚವ್ಹಾಣ್- ಕಹಳೆ ನ್ಯೂಸ್

ಕೊಪ್ಪಳ: ಪಶು ಪಾಲನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ಗೋ ಮಾಂಸ ತಿನ್ನುವೆ ಎಂದು ಹೇಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ರೀತಿ ಗೋ ಹತ್ಯೆಗೆ ಪ್ರಚೋದನೆ ನೀಡಿದರೆ ಅವರನ್ನೇ ಜೈಲಿಗೆ ಹಾಕ್ತೇವೆ ಎಂದು ಮಾಜಿ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಿದ್ದೇವೆ. ಗೋವುಗಳನ್ನು ನಾವು ಮಾತೆ ಎಂದು ಪೂಜೆ ಮಾಡುತ್ತೇವೆ. ಅವುಗಳನ್ನು ಹತ್ಯೆ ಮಾಡಿ ತಿನ್ನುವುದು ಮಹಾ ಅಪರಾಧ. ಸಿದ್ದರಾಮಯ್ಯ ಅವರೂ ಗೋವುಗಳನ್ನು ಮಾತೆ ಎಂದು ಪೂಜೆ ಮಾಡ್ತಾರೆ. ಆದರೆ ಗೋ ಮಾಂಸ ತಿನ್ನುತ್ತೇವೆ ಎನ್ನುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಗೋವು ಹತ್ಯೆಗೆ ಪ್ರಚೋದನೆ ನೀಡುವವರ ಮೇಲೆ ಕ್ರಮ ಕೈಗೊಳ್ಳುವ ಕಾಯ್ದೆ ತರುವಂತೆ ಹೇಳಿದ್ದಾರೆ. ಅದರಂತೆ ಗೋಹತ್ಯೆ ಬಗ್ಗೆ ಪ್ರೋಚದನೆ ನೀಡಿದರೆ ನಾವು ಸಿದ್ದರಾಮಯ್ಯರನ್ನೂ ಜೈಲಿಗೆ ಹಾಕ್ತೇವೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು