ನವದೆಹಲಿ: ರಾಜ್ಯ ಸರ್ಕಾರಗಳು ಹಕ್ಕಿ ಜ್ವರದ ಕಾರಣದಿಂದ ಮುಂಜಾಗ್ರತೆ ವಹಿಸಿಕೊಳ್ಳಬೇಕು. ಇದೇ ವೇಳೆ ಇದರ ಹೆಸರಿನಲ್ಲಿ ಕೋಳಿ ಮಾರಾಟದ ಮೇಲೆ ನಿರ್ಬಂಧ ವಿಧಿಸಬೇಡಿ ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ತಿಳಿಸಿದೆ.
ಕೋಳಿ ಜ್ವರ ದೇಶದ 11 ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಕೋಳಿ ಮಾರಾಟವನ್ನು ಪತ್ತೆ ಹಚ್ಚಲಾದ ಪ್ರದೇಶಗಳಲ್ಲಿ ಮಾಡಬೇಡಿ. ಅದೇ ರೀತಿ ಇತರ ಪ್ರದೇಶಗಳಲ್ಲಿ ನಿರ್ಬಂಧ ವಿಧಿಸಬೇಡಿ ಎಂದು ಕೇಂದ್ರ ಸಲಹೆ ನೀಡಿದೆ. ಅಲ್ಲದೇ ದೇಶದಲ್ಲಿ ಹಕ್ಕಿ ಜ್ವರ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಸರ್ಕಾರ ಸ್ವಷ್ಟಪಡಿಸಿದೆ. ಹಾಗೆ ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುವಂತೆ ಸರ್ಕಾರ ಜನರಿಗೆ ಸಲಹೆ ನೀಡಿದೆ.