Thursday, January 23, 2025
ಹೆಚ್ಚಿನ ಸುದ್ದಿ

ತಾಳಿಕೋಟೆಯಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣ ನಿಧಿಸಮರ್ಪಣಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮ-ಕಹಳೆ ನ್ಯೂಸ್

ತಾಳಿಕೋಟೆ : ತಾಳಿಕೋಟೆಯಲ್ಲಿ ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ನಿರ್ಮಾಣ ನಿಧಿಸಮರ್ಪಣಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮವು ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ನಿಧಿ ಸಮರ್ಪಣ ಅಭಿಯಾನದ ನಿಮಿತ್ಯ ತಾಳಿಕೋಟಿ ತಾಲೂಕಿನ 75 ಗ್ರಾಮಗಳಲ್ಲಿ ಅಭಿಯಾನ ಯಶಸ್ವಿಯಾಗುವ ದೃಷ್ಟಿಯಲ್ಲಿ ಹಾಗೂ ಜಾಗೃತಿ ಸಲುವಾಗಿ ರಾಮನ ರಥಯಾತ್ರೆಯನ್ನು ಇಂದು ಪೂಜ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಈ ರಥಯಾತ್ರೆ ತಾಲೂಕಿನ 75 ಗ್ರಾಮಗಳನ್ನು ಸುತ್ತಿ ರಾಮಜನ್ಮಭೂಮಿ ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹ ಧ್ಯಾನವನ್ನು ಮಾಡಲಾಗುವುದು. ಈ ಸಂದರ್ಭದಲ್ಲಿ ಶ್ರೀ ಸಿದ್ದಲಿಂಗ ದೇವರು ಖಾಸ್ಗತೇಶ್ವರ ಮಠ ತಾಳಿಕೋಟಿ, ಪರಮಪೂಜ್ಯ ಶ್ರೀ ಬಾಲ ಶಿವಯೋಗಿ ಶ್ರೀ ಸೋಮಲಿಂಗ ಸ್ವಾಮೀಜಿ ಕೆಸರಟ್ಟಿ, ವಾಸುದೇವ್ ಹೆಬಸೂರು, ಪರಮಪೂಜ್ಯ ಶ್ರೀ ಗುರುಲಿಂಗ ಶಿವಾಚಾರ್ಯರು ಬ್ರಹ್ಮ ಮಠ ಗುಂಡಕನಾಳ, ಜೈ ಸಿಂಗ್ ಮೂಲಿಮನಿ, ರಾಘವೇಂದ್ರ ವಿಜಾಪುರ್, ಶಿವಶಂಕರ ಹಿರೇಮಠ, ರಾಮ್ ಸಿಂಗ್ ಗೌಡಗೇರಿ, ಕಾಶಿನಾಥ್ ಅರಳಿಚಂಡಿ, ಕಿಶೋರ ಕುಮಟೆ, ತಾಳಿಕೋಟಿಯ ಸಮಸ್ತ ರಾಮನ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು