Thursday, January 23, 2025
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶೇಷ ವಿಜ್ಞಾನ ಉಪನ್ಯಾಸ ಮಾಲಿಕೆ-ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗವು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಜನವರಿ 18ರಿಂದ 22ರ ವರೆಗೆ ಸಂಜೆ ಘಂಟೆ 3 ರಿಂದ 4ರವರೆಗೆ ಐದು ದಿನಗಳ ಸರಣಿ ಉಪನ್ಯಾಸ ಕಾರ್ಯಕ್ರಮವನ್ನುಹಮ್ಮಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳು, ಜನಸಾಮಾನ್ಯರು ಹಾಗೂ ವಿಜ್ಞಾನ ಆಸಕ್ತರಿಗಾಗಿ ಹಮ್ಮಿಕೊಂಡಿರುವ ಈ ಉಪನ್ಯಾಸ ಸರಣಿಯು ಕೋವಿಡ್‍ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ನಡೆಯಲಿರುವುದು. ಪ್ರಥಮ ದಿನ ಖ್ಯಾತ ವಿಜ್ಞಾನ ಲೇಖಕ, ಅಂಕಣಕಾರ ಹಾಗೂ ಕೇಂದ್ರ ಸರಕಾರದ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಅವರು “ಮಳೆ ಹಿಂದಿನ ವಿಜ್ಞಾನ: ಮೇಘ ಮಿತ್ರರೊದ್ದಂ ನರಸಿಂಹ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಎರಡನೇ ದಿನ ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆದ ಹಿರಿಯ ವಿಜ್ಞಾನ ಸಂವಹನಕಾರರಾದ ಕೊಳ್ಳೇಗಾಲ ಶರ್ಮ ಅವರು“ಹೌ ಟು ಬಿ ಇನ್‍ವೆಂಟರ್?” (“How to be Inventor?”) ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಮೂರನೆಯ ದಿನ ಭೌತಶಾಸ್ತ್ರದ ಅತ್ಯುತ್ತಮ ಪ್ರಾಧ್ಯಾಪಕರಲ್ಲೊಬ್ಬರು ಎಂದೇಖ್ಯಾತಿ ಪಡೆದ ಉಜಿರೆಯ ಎಸ್ ಡಿ ಎಂ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ  ಪ್ರೊ. ಟಿ ಎನ್ ಕೇಶವ ಅವರು “ಇರುವುದೆಲ್ಲವ ಬಿಟ್ಟು–ದ ಸ್ಟೋರಿ ಆಫ್ ವ್ಯಾಕ್ಯೂಮ್” (“The story of vacuum”) ಎಂಬ ವಿಷಯವನ್ನು ಪ್ರಸ್ತುತ ಪಡಿಸಲಿದ್ದಾರೆ.

ನಾಲ್ಕನೆಯ ದಿನ ಕಾಂಞ ಗಾಡಿನ ನೆಹರೂ ಕಾಲೇಜಿನ ಭೌತಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥರು ಹಾಗೂ ಖ್ಯಾತ ವಿಜ್ಞಾನ ಸಂವಹನಕಾರ ಪ್ರೊ. ಕೆ ಎಂ ಉದಯನಂದನ್‍ ಅವರು “ವೈ ದ ಸ್ಕೈ ಈಸ್ ಬ್ಲೂ ಇನ್‍ ಕಲರ್?” (“Why the Sky is Blue in Colour?”) ಎಂಬ ವಿಷಯದ ಹೊಸ ಮಜಲುಗಳ ಕುರಿತು ಬೆಳಕು ಚೆಲ್ಲಲಿದ್ದಾರೆ. ಅಂತಿಮ ದಿನದಂದು ವೆಲ್ಲೋರ್‍ ಇನ್ಸ್ಟಿಟ್ಯೂಟ್‍ ಆಫ್‍ ಟೆಕ್ನಾಲಜಿ ಇದರ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ನಾನೋ ಟೆಕ್ನಾಲಜಿ ಕ್ಷೇತ್ರದ ಸಂಶೋಧಕರು ಆದ ಡಾ| ರಮೇಶ್ ಎಂ ತಾಮನ್‍ಕರ್‍ ಅವರು“ಲೊ ಡೈಮೆನ್ಶನಲ್ ಮೆಟೀರಿಯಲ್ಸ್: ಪ್ಲೇಗ್ರೌಂಡ್‍ ಆಫ್ ಫಿಸಿಕ್ಸ್” (“Low dimensional Materials: Playground of Physics”) ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮದ ಸದುಪಯೋಗವನ್ನು ವಿಜ್ಞಾನಾಸಕ್ತರು ಪಡೆದುಕೊಳ್ಳಬೇಕಾಗಿ ಕಾರ್ಯಕ್ರಮದ ಆಯೋಜಕರಾದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ ವಿ ರಾವ್ ಮತ್ತು ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ   ಡಾ| ಎ ಪಿ ರಾಧಾಕೃಷ್ಣ ವಿನಂತಿಸಿದ್ದಾರೆ. ಆಸಕ್ತರು ನೋಂದಾವಣೆಗಾಗಿ ಕಾರ್ಯಕ್ರಮ ಸಂಯೋಜಕ ಡಾ| ದೀಪಕ್ ಡಿಸಿಲ್ವ (ಮೊ: 8970093263) ಇವರನ್ನುಸಂಪರ್ಕಿಸಬಹುದುಎಂದುಕಾಲೇಜಿನ ಪಿಆರ್‍ಒ ಪ್ರಕಟಣೆ ತಿಳಿಸಿದೆ.