Sunday, January 19, 2025
ಹೆಚ್ಚಿನ ಸುದ್ದಿ

ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವ ಆರಂಭ-ಕಹಳೆ ನ್ಯೂಸ್

ಕುಂಬಳೆ: ಗುರುವಾರದಿಂದ ಇತಿಹಾಸದ ಪ್ರಸಿದ್ದ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವ ಆರಂಭಗೊಂಡಿದ್ದು, ಕೋವಿಡ್ ಮಾನದಂಡಗಳೊಂದಿಗೆ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಶನಿವಾರ ಬೆಳಿಗ್ಗೆ 6.30 ರಿಂದ ಉತ್ಸವ, ಶ್ರೀಭೂತಬಲಿ, 10.30 ರಿಂದ ತುಲಾಭಾರ ಸೇವೆ, ಮತ್ತು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಹಾಗೂ ಸಂಜೆ 6.30ಕ್ಕೆ ದೀಪಾರಾಧನೆ, ವಿಶ್ವರೂಪದರ್ಶನ ರಾತ್ರಿ 7ರಿಂದ ನಡು ದೀಪೋತ್ಸವ, ದರ್ಶನಬಲಿ, ಪೂಜೆ ನಡೆಯಿತು.

ಇಂದು ಬೆಳಿಗ್ಗೆ 6.30 ರಿಂದ ಉತ್ಸವ, ಶ್ರೀಭೂತಬಲಿ, 10.30 ರಿಂದ ತುಲಾಭಾರ ಸೇವೆ, ಮತ್ತು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಹಾಗೂ ರಾತ್ರಿ 7ರಿಂದ ಉತ್ಸವ, ಸಾಂಕೇತಿಕ ಬೆಡಿ ಸೇವೆ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ.

ಕೋವಿಡ್ ಕಾರಣದಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹೊರತುಪಡಿಸಲಾಗಿದ್ದರೂ ಭಕ್ತರು ದಿನನಿತ್ಯ ಶ್ರೀಕ್ಷೇತ್ರಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದು, ಕೋವಿಡ್ ನಿಯಾಮಾವಳಿಗೆ ಅನುಸಾರವಾಗಿ ಅರ್ಚನೆ, ಪ್ರಾರ್ಥನೆ, ಪ್ರಸಾದ ಸ್ವೀಕಾರಕ್ಕೆ ಭಾರೀ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವ್ಯವಸ್ಥೆ ಏರ್ಪಡಿಸಲಾಗಿದೆ.

ಹಾಗೇ ನಾಳೆ ಬೆಳಿಗ್ಗೆ 6.30 ರಿಂದ ಕವಾಟೋದ್ಘಾಟನೆ, 10.30ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅಪರಾಹ್ನ 3.30ರಿಂದ ಅವಭೃತೋತ್ಸವ, ಉತ್ಸವ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಧ್ವಜಾವರೋಹಣ ನಡೆಯುವುದರೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.