Sunday, January 19, 2025
ಸಿನಿಮಾ

ಬಾಲಿವುಡ್ ಚೆಲುವೆ ದೀಪಿಕಾ ಮದ್ವೆ ದಿನಾಂಕ ಕನ್ಫರ್ಮ್ !

ಮುಂಬೈ: ಬಾಲಿವುಡ್‍ನ್ ಪ್ರಣಯ ಪಕ್ಷಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಇಬ್ಬರು ಮದುವೆ ಇದೇ ವರ್ಷ ಆಗಲಿದೆ ಅಂತಾ ಕುಟುಂಬ ಮೂಲಗಳು ತಿಳಿಸಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿಯೇ ದೀಪಿಕಾ ಮದುವೆ ಶಾಪಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿಯೊಂದು ಸಹ ಹರಿದಾಡಿತ್ತು.

ಈ ಹಿಂದೆ ದೀಪಿಕಾ ಮತ್ತು ರಣ್‍ವೀರ್ ಇದೇ ವರ್ಷ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿ ಪ್ರಕಟವಾಗಿತ್ತು. ಆದ್ರೆ ಯಾವಾಗ, ಎಲ್ಲಿ, ಹೇಗೆ ಎಂಬುದರ ಬಗ್ಗೆ ಮಾಹಿತಿಗಳನ್ನು ಕುಟುಂಬಸ್ಥರು ರಿವೀಲ್ ಮಾಡಿರಲಿಲ್ಲ. ಸದ್ಯ ವರ್ಷಾಂತ್ಯದಲ್ಲಿ ಅಂದ್ರೆ ಸೆಪ್ಟಂಬರ್ ಅಥವಾ ಡಿಸೆಂಬರ್ ನಲ್ಲಿ ಕ್ಯೂಟ್ ಜೋಡಿಗಳು ಸಾಂಸಾರಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಪುರೋಹಿತರು ನಾಲ್ಕು ದಿನಾಂಕಗಳನ್ನು ಎರಡು ಕುಟುಂಬಗಳಿಗೆ ನೀಡಿದ್ದು, ಇನ್ನೇನು ಅಂತಿಮವಾಗಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ರಣ್‍ವೀರ್ ಸಿಂಗ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ನನ್ನ ಮುಂದಿನ ಜೀವನದ ತಯಾರಿಯಲ್ಲಿಯೂ ನಾನಿದ್ದೇನೆ ಅಂತಾ ಹೇಳಿದ್ರು.

ಇಬ್ಬರೂ ಸ್ಟಾರ್ ಗಳು ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಎರಡು ಕುಟುಂಬಗಳಿಂದ ದಿನಾಂಕ ಅಂತಿಮವಾದ ಕೂಡಲೇ ಇಬ್ಬರ ಮದುವೆ ಆಗಲಿದೆ. ರಾಮ್‍ಲೀಲಾ, ಬಾಜೀರಾವ್ ಮಸ್ತಾನಿ ಹಾಗು ಪದ್ಮಾವತ್ ಸಿನಿಮಾಗಳಲ್ಲಿ ರಣ್‍ವೀರ್ ಮತ್ತು ದೀಪಿಕಾ ಕೆಮಿಸ್ಟ್ರಿ ತೆರೆಯ ಮೇಲೆ ಮೋಡಿ ಮಾಡಿತ್ತು. ದೀಪಿಕಾ ತಮ್ಮ ಮುಂದಿನ ಚಿತ್ರ ‘ಲವ್ 4 ಎವರ್’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ರಣ್‍ವೀರ್ ಸಿಂಗ್ ಗುಲ್ಲಿ ಬಾಯ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.