ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಶುಕ್ರವಾರ ಜನಮೈತ್ರಿ ಪೊಲೀಸ್ ಸಹಕಾರದೊಂದಿಗೆ ಟ್ರೂ ಲೈಫ್ ಕೇರ್ ಕಾಸರಗೋಡು ಇವರ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಿತು.
ಈ ಕಾರ್ಯಕ್ರಮವನ್ನು ಡಾ. ಅನೂಪ್ ವಾರ್ಯರ್ ಆಶ್ರಮವಾಸಿಗಳ ತಪಾಸಣೆಯನ್ನು ನಡೆಸಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ರೈಂ ದಾಖಲಾತಿ ಬ್ಯುರೋ ಪ್ರಧಾನ ಅಧಿಕಾರಿ ಲತೀಶ್, ಜನಮೈತ್ರಿ ಪೊಲೀಸ್ ವಿಭಾಗದ ಅನೂಪ್, ಮಹೇಶ್, ಆಶ್ರಮದ ಟ್ರಸ್ಟಿಗಳಾದ ಶ್ರೀಕೃಷ್ಣ ಭಟ್ ಪುದುಕೋಳಿ, ಗಣೇಶ್ ಕೃಷ್ಣ ಆಳಕ್ಕೆ, ಎಎಸ್‍ಐ ಮಹಮ್ಮದ್ ಶಾಫಿ, ಟ್ರೂ ಲೈಫ್ ಕೇರ್ ಸಂಯೋಜಕ ಅಸ್ಕರ್ ಕೀಯೂರ್, ಅಫೀಫ್, ಪಾಲ್ಗೊಂಡಿದ್ದರು. ಕೊರೋನಾ ಕಾಲಘಟ್ಟದಲ್ಲಿ ಆಸ್ವತ್ರೆಗೆ ತೆರಳಲು ರೋಗಿಗಳು ಹಿಂದೇಟು ಹಾಕುತ್ತಿದ್ದು, ನಿಜವಾಗಿಯೂ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬೇಕು ಎಂಬ ಉದ್ದೇಶದೊಂದಿಗೆ ಇಂತಹ ಕಾರ್ಯಕ್ರಮಗಳನ್ನು ವಿವಿಧೆಡೆ ಹಮ್ಮಿಕೊಳ್ಳಲಾಗುವುದು ಎಂಬುದು ಜನಮೈತ್ರಿ ಪೊಲೀಸ್ ಮತ್ತು ಟ್ರೂಲೈಫ್ ಕೇರ್ನ ಉದ್ದೇಶವಾಗಿದೆ.