Sunday, January 19, 2025
ಸುದ್ದಿ

ಕಿನ್ನಿಗೋಳಿಯಲ್ಲಿ ದಲಿತ ಮಹಿಳೆಯರಿಗೆ ಮೀನು ಮಾರಾಟಕ್ಕೆ ಅಡ್ಡಿ; ನ್ಯಾಯಕ್ಕಾಗಿ ಕಮಿಷನರ್ ಮೊರೆ-ಕಹಳೆ ನ್ಯೂಸ್

ಮಂಗಳೂರು : ಕಳೆದ 70 ವರ್ಷಗಳಿಂದ ದಲಿತ ಮಹಿಳೆಯರು ಕಿನ್ನಿಗೋಳಿ ಗ್ರಾಮ ಪಂಚಾಯತ್‍ನ ಮೀನು ಮಾರುಕಟ್ಟೆಯಲ್ಲಿ ಒಣ ಮೀನು ಮತ್ತು ಚಿಪ್ಪು ಮಾರಾಟ ಮಾಡುತ್ತಾ ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇತ್ತೀಚೆಗೆ ಅಲ್ಲಿ ಹಸಿ ಮೀನು ಮಾರಾಟ ಮಾಡುವ ಕೆಲ ಮಹಿಳೆಯರು ಇವರಿಗೆ ಕಿರುಕುಳ ನೀಡುತ್ತಿದ್ದಾರೆಂದು ದಲಿತ ಮಹಿಳೆಯರು ಆರೋಪಿಸಿದ್ದಾರೆ. ಅಲ್ಲದೆ ಈ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ ನೊಂದ ಮಹಿಳೆಯರು, ನಾವು ಅಲ್ಲಿ ತಲತಲಾಂತರಗಳಿಂದ ಒಣ ಮೀನು ಮಾರಾಟ ಮಾಡುತ್ತಾ ಬಂದಿದ್ದೇವೆ. ಆದರೆ ಇತ್ತೀಚೆಗೆ ಕೆಲ ಇತರ ಸಮುದಾಯದ ಮಹಿಳೆಯರು ನಮಗೆ ಕಿರುಕುಳ ನೀಡುತ್ತಾ ಬಂದಿದ್ದು, ನಮ್ಮ ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಾವು ಮೀನು ಮಾರಾಟ ಮಾಡುವ ಮುಂಭಾಗವೇ ಹಸಿ ಮೀನು ಹಾಕಿ ಕೂತು ಅಡ್ಡಿಪಡಿಸುವುದು, ನಮ್ಮ ಬಳಿ ಬರುವ ಗ್ರಾಹಕರ ಜೊತೆ ಅನುಚಿತವಾಗಿ ವತಿಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತಂತೆ ನಾವು ಮುಲ್ಕಿ ಪೆÇಲೀಸ್ ಠಾಣೆಯಲ್ಲಿ 2 ಬಾರಿ ದೂರನ್ನು ದಾಖಲಿಸಿದ್ದೇವೆ. ಪೆÇಲೀಸರು ಮುಚ್ಚಳಿಕೆ ಬರೆದು ಪ್ರಕರಣವನ್ನು ಇತ್ಯರ್ಥ ಮಾಡಿದ್ದರೂ, ಆ ಮಹಿಳೆಯರು ತಮ್ಮ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾರೆ. ಹಾಗೇ ಜಾತಿ ನಿಂದನೆ ಕಿರುಕುಳದಿಂದ ನಾವು ನೊಂದಿದ್ದು, ನ್ಯಾಯಕ್ಕಾಗಿ ಪೆÇಲೀಸ್ ಕಮಿಷನರ್ ಮೊರೆ ಹೋಗಿದ್ದೇವೆ ಎಂದು ಮಹಿಳೆಯರು ತಿಳಿಸಿದ್ದಾರೆ. ಹಾಗೆಯೇ ನೊಂದ ಮಹಿಳೆಯರ ಬಳಿ ಮೀನು ಖರೀದಿಗೆಂದು ಬಂದಿದ್ದ ನನಗೆ ಅಲ್ಲಿನ ಹಸಿ ಮೀನು ಮಾರಾಟ ಮಾಡುವ ಮಹಿಳೆಯರು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ, ಮೀನು ಖರೀದಿಸದಂತೆ ಕಿರುಕುಳ ನೀಡಿದ್ದು, ಜೊತೆಗೆ ನನ್ನ ಜಾತಿಯ ಹೆಸರೇಳಿ ನಿಂದಿಸಿದ್ದಾರೆ. ಅಲ್ಲದೆ ನನ್ನನ್ನು ಮಾರುಕಟ್ಟೆಯಿಂದ ಹೊರಹೋಗುವಂತೆ ಬೆದರಿಸಿದ್ದು, ಹೊರ ಹೋಗುವ ವೇಳೆ ಮಹಿಳೆಯೋರ್ವಳು ತಮ್ಮ ಲಂಗ ಎತ್ತಿ ತೋರಿಸಿದ್ದಾರೆ ಎಂದು ಪೃಥ್ವಿ ಎಂಬ ಯುವಕ ಕಮಿಷನರ್‍ಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು