ಗಂಗಾವತಿ : ಗಂಗಾವತಿ ತಾಲೂಕಿನ ಆನೆಗೊಂದಿಯ ಐತಿಹಾಸಿಕ ದುರ್ಗಾದೇವಿ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೋಮವಾರ ಬೆಳಗ್ಗೆ ಚಿರತೆ ಬಿದ್ದಿದೆ.
ಅಂದಾಜು 6 ರಿಂದ 7 ವರ್ಷದ ಗಂಡು ಚಿರತೆ ಇದಾಗಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಆನೆಗೊಂದಿ ವ್ಯಾಪ್ತಿಯಲ್ಲಿಯೇ ಕಳೆದ ಮೂರು ತಿಂಗಳಿಂದ ಚಿರತೆ ಸೆರೆಹಿಡಿಯಲು ಬೀಡುಬಿಟ್ಟಿತ್ತು. ಇದೇ ಬೆಟ್ಟದಲ್ಲಿ ಕಳೆದ ತಿಂಗಳು ಚಿರತೆಯೊಂದನ್ನ ಸೆರೆಹಿಡಿಯಲಾಗಿತ್ತು. ಇದೀಗ ಎರಡನೇ ಚಿರತೆಯು ಬೋನಿಗೆ ಬೀಳುವ ಮೂಲಕ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕ ದೂರವಾಗಿದೆ.