Saturday, November 23, 2024
ರಾಜಕೀಯ

ಚೀನಾ ಗಡಿಯಲ್ಲಿ ಟಿಬೆಟ್ ಬಳಿ ಹೆಚ್ಚುವರಿ ಸೇನೆ ನಿಯೋಜಿಸಿದ ಭಾರತ – ಕಹಳೆ ನ್ಯೂಸ್

ನವದೆಹಲಿ: ಭಾರತ-ಚೀನಾ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಟಿಬೆಟಿಯನ್ ಪ್ರದೇಶದ ಅರುಣಾಚಲ ಸೆಕ್ಟರ್ ನ ಡೌ-ಡೆಲೈ ಮತ್ತು ಲೋಹಿತ್ ಹಾಗೂ ದಿಬಾಂಗ್ ಕಣಿವೆಯಲ್ಲಿ ಭಾರತ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ. ಅಲ್ಲದೆ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಿದೆ.

ಟಿಬೆಟಿಯನ್ ಪ್ರದೇಶದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಚೀನೀ ಚಟುವಟಿಕೆಗಳ ಬಗ್ಗೆ ಕಣ್ಣಿಡಲು ಭಾರತವು ತನ್ನ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುತ್ತಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ದಿಬಾಂಗ್ ಮತ್ತು ಡೌ-ಡೆಲೈ ಮತ್ತು ಲೋಹಿತ್ ಕಣಿವೆಗಳಲ್ಲಿ ಹೆಚ್ಚುತ್ತಿರುವ ಚೀನಾದ ಚಟುವಟಿಕೆಗಳನ್ನು ತಡೆಯುವ ತಂತ್ರದ ಒಂದು ಭಾಗವಾಗಿ, 17,000 ಅಡಿ ಎತ್ತರದ ಹಿಮಪರ್ವತ ಮತ್ತು ನದಿ ಕಣಿವೆಗಳು ಸೇರಿದಂತೆ ದುರ್ಗಮ ಪ್ರದೇಶಗಳಲ್ಲಿ ಮೇಲುಗೈ ಸಾಧಿಸಲು ಚೀನಾ ಹವಣಿಸುತ್ತಿರುವ ಹಿನ್ನೆಲೆಯಲ್ಲಿ ಗಸ್ತು ತೀವ್ರಗೊಳಿಸಲಾಗಿದೆ ಎಂದಿದ್ದಾರೆ.
ಡೋಕ್ಲಾಂ ವಿವಾದದ ನಂತರ ಚೀನಾ ಗಡಿಯಲ್ಲಿ ನಮ್ಮ ಚಟುವಟಿಕೆಗಳನ್ನು ಹಲವು ಪಟ್ಟು ಹೆಚ್ಚಿಸಿದ್ದೇವೆ. ಯಾವುದೇ ಸವಾಲು ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಕಿಬಿತುವಿನಲ್ಲಿ ನಿಯೋಜಿತರಾಗಿರುವ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು