Recent Posts

Monday, January 20, 2025
ಹೆಚ್ಚಿನ ಸುದ್ದಿ

ಶಿಶು ಮಾರಾಟ ಜಾಲ ಪ್ರಕರಣ ಸಂಬಂಧಿಸಿದಂತೆ ಆರು ಮಹಿಳೆಯರ ಸಹಿತ ಎಂಟು ಮಂದಿ ಬಂಧನ-ಕಹಳೆ ನ್ಯೂಸ್

ಮುಂಬೈ: ಮಕ್ಕಳ ಬೃಹತ್ ಮಾರಾಟ ಜಾಲ ಪ್ರಕರಣ ಸಂಬಂಧ ಆರು ಮಹಿಳೆಯರ ಸಹಿತ ಎಂಟು ಮಂದಿಯನ್ನು ಮುಂಬೈ ಪೊಲೀಸರು ಬಂದಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಈ ತಂಡ ನಾಲ್ಕು ಶಿಶುಗಳನ್ನು ಮಾರಾಟ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರ ತಂಡವನ್ನು ಪೊಲೀಸ್ ಅಧಿಕಾರಿಗಳಾದ ಯೋಗೇಶ್ ಚವಾಣ್ ಮತ್ತು ಮನಿಷ್ ನೇತೃತ್ವದ ತಂಡ ಈ ಪ್ರಕರಣ ಬಯಲಿಗೆಳೆದಿದೆ. ರುಕ್ಸಾರ್ ಶೇಖ್, ಶಾಹಜಹಾನ್ ಹಾಗೂ ರೂಪಾಲಿ ವರ್ಮ ಈ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಇವರು 60000 ರೂಪಾಯಿಗೆ ಹೆಣ್ಣು ಮಗುವನ್ನು, ಮತ್ತು 1.50 ಲಕ್ಷ ರೂಪಾಯಿಗೆ ಗಂಟು ಮಗುವನ್ನು ಮಾರಾಟ ಮಾಡಿದ್ದಾರೆ. ಎಲ್ಲ ಆರೋಪಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದ್ದು, ಇದೊಂದು ವ್ಯವಸ್ಥಿತ ಜಾಲವಾಗಿದೆ. 10 ಕ್ಕಿಂತ ಹೆಚ್ಚು ಮಕ್ಕಳನ್ನು ಈ ತಂಡ ಮಾರಾಟ ಮಾಡಿರುವ ಸಾಧ್ಯತೆ ಇದೆ ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು