Saturday, November 23, 2024
ಹೆಚ್ಚಿನ ಸುದ್ದಿ

ಪೆಟ್ರೋಲ್ ಮತ್ತು ಡೀಸೇಲ್ ದರ ಲೀಟರ್‌ಗೆ ತಲಾ 25 ಪೈಸೆ ಹೆಚ್ಚಳ -ಕಹಳೆ ನ್ಯೂಸ್

ಜನವರಿ 18ರಿಂದ ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ ರೂ. 84.95 ತಲುಪಿದೆ. ತೈಲ ಮಾರ್ಕೆಟಿಂಗ್ ಕಂಪನಿಗಳ ಅಧಿಸೂಚನೆ ಅನ್ವಯ ದೆಹಲಿ ಮತ್ತು ಇತರ ಕಡೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್‌ಗೆ ತಲಾ 25 ಪೈಸೆಗಳ ಸರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸಕ್ತ ಹಣಕಾಸು ವರ್ಷದಲ್ಲಿ ಪೆಟ್ರೋಲ್-ಡೀಸೆಲ್ ಮೇಲೆ ಹಾಕಿರುವ ಅಬಕಾರಿ ಸುಂಕ 48% ಆಗಿದ್ದು, 2020ರ ಏಪ್ರಿಲ್ ನಿಂದ ನವೆಂಬರ್ ತಿಂಗಳವರೆಗೆ ಅಬಕಾರಿ ಸುಂಕ 1,96,342 ಕೋಟಿ, ಹಾಗೆಯೇ 2019ರ ಇದೇ ಅವಧಿಯಲ್ಲಿ 1,32,899 ಕೋಟಿ ರುಪಾಯಿ ಸಂಗ್ರಹ ಆಗಿತ್ತು ಎಂದು ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ದತ್ತಾಂಶದಿಂದ ತಿಳಿದು ಬಂದಿದೆ. ಒಂದು ತಿಂಗಳ ಕಾಲ ಪೆಟ್ರೋಲ್-ಡೀಸೆಲ್ ದರ ಪರಿಷ್ಕರಣೆ ಆಗಿರಲಿಲ್ಲ ತದ ನಂತರ ಜನವರಿ 6ರಿಂದ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂಗಳಿಂದ ಪರಿಷ್ಕರಣೆ ಆಯಿತು. ದೆಹಲಿಯಲ್ಲಿ ಅಕ್ಟೋಬರ್ 4, 2018 ರಂದು ಪೆಟ್ರೋಲ್ ದರ ರೂ. 84 ರಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ರೂ. 75.45 ಮುಟ್ಟಿತ್ತು. ಪ್ರಸ್ತುತ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ ಬೆಂಗಳೂರು 87.82 ರೂ., ಚೆನ್ನೈ ರೂ.87.64, ಹೈದರಾಬಾದ್ ರೂ.88.37, ಮುಂಬೈ ರೂ. 91.56, ದೆಹಲಿ ರೂ.84.95, ಕೋಲ್ಕತ್ತಾ ರೂ.86.39. ಹಾಗೆಯೇ ಡೀಸೆರ್ ದರದಲ್ಲೂ ಏರಿಕೆ ಕಂಡಿದ್ದು ಬೆಂಗಳೂರು ರೂ.79.67, ಚೆನ್ನೈ ರೂ. 80.44, ಹೈದರಾಬಾದ್ ರೂ.81.99, ಮುಂಬೈ ರೂ.81.87, ದೆಹಲಿ ರೂ.75.13, ಕೋಲ್ಕತ್ತಾ ರೂ.78.72 ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು