Recent Posts

Sunday, January 19, 2025
ಸುದ್ದಿ

ಮಂಗಳೂರು; ಕಸ ತೆರವುಗೊಳಿಸುವ ಸಂದರ್ಭದಲ್ಲಿ ಮಾನವ ಭ್ರೂಣದ ಕೊಳೆತ ಅವಶೇಷಗಳು ಪತ್ತೆ-ಕಹಳೆ ನ್ಯೂಸ್

ಮಂಗಳೂರು : ಜನವರಿ 17 ರ ರವಿವಾರ ಮುಲ್ಕಿ-ಕಿನ್ನಿಗೋಲಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ರಸ್ತೆ ತಿರುವಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ವಿಲೇವಾರಿ ಮಾಡಲಾದ ಮಾನವ ಭ್ರೂಣದ ಕೊಳೆತ ಅವಶೇಷಗಳು ಪತ್ತೆಯಾಗಿದ್ದು, ಎಸೆದ ಸ್ಥಳದಲ್ಲಿ ದುರ್ವಾಸನೆ ಹರಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು ತ್ಯಾಜ್ಯ ವಿಲೇವಾರಿ ಮಾಡುವಾಗ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಕೊಳೆತ ಭ್ರೂಣ ಮತ್ತು ಎರಡು ಕೈ ಕೈಗವಸುಗಳು ಜೊತೆಗೆ ಪ್ಯಾಡ್ ದೊರಕಿದೆ. ಅದರ ಪಕ್ಕದಲ್ಲಿ ದೊರೆತ ಮತ್ತೊಂದು ಚೀಲದಲ್ಲಿ ಸ್ಯಾನಿಟರಿ ಪ್ಯಾಡ್, ನೈಟಿ ಹಾಗೂ ಬಟ್ಟೆಗಳು ಇದ್ದವು. ಕಳೆದ ವಾರ ಇಲ್ಲಿ ಮಳೆಯಾದ ಕಾರಣ ಪ್ಲಾಸ್ಟಿಕ್ ಚೀಲಕ್ಕೆ ನೀರು ನುಗ್ಗಿ ಭ್ರೂಣ ಕೊಳೆತು ಹೋಗಿರಬಹುದು ಎಂದು ಶಂಕಿಸಲಾಗಿದೆ.ಸ್ಥಳಕ್ಕೆ ಭೇಟಿ ನೀಡಿದ ಮುಲ್ಕಿ ಪೆÇಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು