Friday, September 20, 2024
ಸುದ್ದಿ

ಕ್ಯಾರೆಟ್ ಕೇಕ್ – ಅಡುಗೆ ಮನೆ

Carrot-cake
Carrot-cake

ಕ್ಯಾರೆಟ್ ಕೇಕ್ – ಅಡುಗೆ ಮನೆ : 

ಬೇಕಾಗುವ ಪದಾರ್ಥಗಳು
  • ಮಿಲ್ಕ್ ಮೇಡ್: 397 ಗ್ರಾಂ
  • ಬಟರ್ ಮಿಲ್ಕ್ – ಅರ್ಧ ಬಟ್ಟಲು
  • ಆಲಿವ್ ಆಯಿಲ್ – 1/4 ಬಟ್ಟಲು
  • ವಿನಿವ್ವಾ ಎಕ್ಸ್ಟಾಕ್ಟ್ – ಚಮಚ
  • ವಿನೇಗರ್ – 1 ಚಮಚ
  • ಮೈದಾ ಹಿಟ್ಟು – 2 ಬಟ್ಟಲು (263 ಗ್ರಾಂ)
  • ಬೇಕಿಂಗ್ ಪೌಡರ್ – 1 ಚಮಚ
  • ಬೇಕಿಂಗ್ ಸೋಡಾ – ಅರ್ಧ ಚಮಚ
  • ಚಕ್ಕೆ ಪುಡಿ – ಮುಕ್ಕಾಲು ಚಮಚ
  • ಉಪ್ಪು – ಚಿಟಿಕೆಯಷ್ಟು
  • ಕ್ಯಾರೆಟ್ – ತುರಿದದ್ದು 1 ಬಟ್ಟಲು (180 ಗ್ರಾಂ)
  • ಬಾದಾಮಿ – ಸಣ್ಣಗೆ ಹೆಚ್ಚಿದ್ದು 2 ಚಮಚ
  • ಒಣ ದ್ರಾಕ್ಷಿ – 2 ಚಮಚ
ಮಾಡುವ ವಿಧಾನ…
  • ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮಿಲ್ಕ್ ಮೇಡ್, ಬಟರ್ ಮಿಲ್ಕ್, ಆಲಿವ್ ಆಯಿಲ್, ವಿನಿವ್ವಾ ಎಕ್ಸ್ಟಾಕ್ಟ್. ವಿನೇಗರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
  • ನಂತರ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಚಕ್ಕೆ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಭಬೇಕು.
  • ಬಳಿಕ ಕ್ಯಾರೆಟ್, ಬಾದಾಮಿ, ಒಣ ದ್ರಾಕ್ಷಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಪ್ಯಾನ್ ತೆಗೆದುಕೊಂಡು ಅದಕ್ಕೆ ಈ ಮಿಶ್ರಣವನ್ನು ಹಾಕಿ ಒವನ್ ನಲ್ಲಿ 180 ಡಿಗ್ರಿ ಸೆಲ್ಶಿಯಸ್ ನಲ್ಲಿ 30 ನಿಮಿಷ ಬೇಯಲು ಬಿಟ್ಟರೆ ರುಚಿಕರವಾದ ಕ್ಯಾರೆಟ್ ಕೇಕ್ ಸವಿಯಲು ಸಿದ್ಧ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು