Recent Posts

Monday, January 20, 2025
ಪುತ್ತೂರು

ಪುತ್ತೂರು ; ಕೃಷ್ಣನಾಯ್ಕ ಇವರಿಗೆ , ಉದ್ಯಮಿ ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಅವರಿಂದ ಮನೆ ರಚನೆಯ ಭರವಸೆ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ನಿವಾಸಿ ಕೃಷ್ಣನಾಯ್ಕ ಇವರು ಯವುದೇ ಮೂಲಸೌಕರ್ಯಗಳಿಲ್ಲದೆ ಸಣ್ಣ ಜೋಪಡಿ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ಅರಿತ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ಈಶ್ವರಮಂಗಲದ ಸದಸ್ಯರು , ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ಗಮನಕ್ಕೆ ತಂದು ವಿನಂತಿ ಮಾಡಿಕೊಂಡ ಮೇರೆಗೆ ಸದರಿ ಕೃಷ್ಣನಾಯ್ಕರ ಮನೆಗೆ ಭೇಟಿ ನೀಡಿರುತ್ತಾರೆ.

ಇವರ ಸಮಸ್ಯೆಯನ್ನು ಮನಗಂಡು ಹೊಸ ಮನೆ ಮತ್ತು ಮೂಲಸೌಕರ್ಯ ರಚನೆಗೆ ಬೇಕಾದ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿರುತ್ತಾರೆ. ಅಲ್ಲದೆ ಈಶ್ವರಮಂಗಲ ಪೋಲೀಸ್ ಠಾಣೆಯ ಸಿಬ್ಬಂದಿಗಳು, ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ಈಶ್ವರಮಂಗಲ ಇದರ ಸದಸ್ಯರ ಸಹಕಾರದೊಂದಿಗೆ ಇವರ ಮನೆ ರಚನೆ ಕೆಲಸವನ್ನು ಅಯೋಜಿಸಲಾಯಿತು.