Sunday, January 19, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಲವ್ ಜಿಹಾದಿಗೆ ಬಲಿಯಾದ ಹಿಂದೂ ಯುವತಿಗೆ ಹಾಗೂ ಆಕೆಯ ಮಕ್ಕಳಿಗೆ ಸಹಾಯದ ನೆಪದಲ್ಲಿ ಲೈಂಗಿಕ ಕಿರುಕುಳ ; ಕಾಮುಕ SDPI ಮುಖಂಡನ ವಿರುದ್ಧ ಪೋಕ್ಸೊ ಕೇಸ್ ದಾಖಲು – ಉಳ್ಳಾಲ ಕ್ಷೇತ್ರ ಸಮಿತಿಯ ಅಧ್ಯಕ್ಷ ಲಂಪಟ ಸಿದ್ದೀಖ್ ಪತ್ತೆಗೆ ಬಲೆ ಬೀಸಿದ ಪೋಲಿಸರು..! – ಕಹಳೆ ನ್ಯೂಸ್

ಉಳ್ಳಾಲ ಕ್ಷೇತ್ರ ಸಮಿತಿಯ ಅಧ್ಯಕ್ಷನಾಗಿರುವ ಸಿದ್ದೀಖ್ ಗಂಡನಿಂದ ದೂರವಾದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಆಕೆಯ ಪರಿಚಯ ಮಾಡಿಕೊಂಡು ನಿರಂತರ ಅತ್ಯಾಚಾರ ವೆಸಗಿದ್ದಾನೆ. ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಮಂಗಳೂರು: ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಮತ್ತು ಕಿರುಕುಳ ಆರೋಪ ಕೇಳಿ ಬಂದಿದ್ದು SDPI ಮುಖಂಡ ಸಿದ್ದೀಖ್ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ. ಮಂಗಳೂರು ಹೊರವಲಯದ ಉಳ್ಳಾಲ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಳ್ಳಾಲ ಕ್ಷೇತ್ರ ಸಮಿತಿಯ ಅಧ್ಯಕ್ಷನಾಗಿರುವ ಸಿದ್ದೀಖ್​ನಿಂದ ಕಿರುಕುಳಕ್ಕೆ ಒಳಗಾದ ಮಹಿಳೆ ಹಿಂದೂ ಸಮುದಾಯದಿಂದ ಮತಾಂತರಗೊಂಡು ಕೇರಳ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದರು. ಬಳಿಕ ಗಂಡನಿಂದ ಹಾಗೂ ಮನೆಯಿಂದ ಹೊರ ಹಾಕಲ್ಪಟ್ಟಿದ್ದಳು. ಹೀಗಾಗಿ ಗಂಡನಿಂದ ದೂರವಾದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಸಿದ್ದೀಖ್, ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಆಕೆ ಮೇಲೆ ನಿರಂತರ ಅತ್ಯಾಚಾರ ವೆಸಗಿದ್ದಾನೆ. ಮತ್ತು ಆಕೆಯ 9ಮತ್ತು 6ವರ್ಷದ ಇಬ್ಬರು ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸಿದ್ದೀಖ್ ವಿರುದ್ಧ ಅತ್ಯಾಚಾರ, ಪೋಕ್ಸೊ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಸಿದ್ದೀಖ್​ಗಾಗಿ ಬಲೆ ಬೀಸಿದ್ದಾರೆ.