Recent Posts

Sunday, January 19, 2025
ಹೆಚ್ಚಿನ ಸುದ್ದಿ

ತಿರುಪತಿ ತಿಮ್ಮಪ್ಪನ ಸನ್ನಿಧಾನದ ಬೆಟ್ಟವನ್ನೇರುವ ಸಂದರ್ಭದಲ್ಲಿ ಭಕ್ತರನ್ನು ಬೆದರಿಸಿ ದರೋಡೆಗೆ ಯತ್ನಿಸಿದ ದರೋಡೆಕೋರರು-ಕಹಳೆ ನ್ಯೂಸ್

ತಿರುಪತಿ : ಶ್ರೀಮಂತ ದೇಗುಲವೆಂಬ ಖ್ಯಾತಿಗೆ ಪಾತ್ರವಾಗಿರುವ ತಿರುಪತಿ ತಿರುಮಲ ದೇವಸ್ಥಾನದಲ್ಲೀಗ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ತಿರುಪತಿ ತಿಮ್ಮಪ್ಪನ ಸನ್ನಿಧಾನದ ಬೆಟ್ಟವನ್ನೇರುವ ಸಂದರ್ಭದಲ್ಲಿ ಭಕ್ತರನ್ನು ಬೆದರಿಸಿ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಭಕ್ತರು ಬೆಚ್ಚಿಬಿದ್ದಿದ್ದಾರೆ. ಕರ್ನೂಲ್ ಮೂಲದ ಸುನಿಲ್ ಮತ್ತು ಅವರ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ತಡರಾತ್ರಿ ಅಲಿಪಿರಿಯಿಂದ ತಿರುಮಲ ಬೆಟ್ಟವನ್ನೇರುತ್ತಿದ್ದರು. ಈ ವೇಳೆಯಲ್ಲಿ ಕಳ್ಳರ ಗುಂಪೊಂದು ಕುಟುಂಬವನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದು, ಇನ್ನೂ ದೇವಸ್ಥಾನವನ್ನು ತಲುಪಲು 2830 ಮೆಟ್ಟಿಲು ದೂರದಲ್ಲಿರುವಾಗಲೇ ಈ ಘಟನೆ ನಡೆದಿದೆ.

ಕುಟುಂಬದವರ ಬಳಿಯಲ್ಲಿದ್ದ ಚಿನ್ನಾಭರಣಗಳನ್ನು ದೋಚಲು ದರೋಡೆಕೋರರ ತಂಡ ಮುಂದಾಗಿದ್ದು, ಈ ಸಮಯದಲ್ಲಿ ಕುಟುಂಬ ಸಹಾಯವಾಣಿ 100ಕ್ಕೆ ಕರೆ ಮಾಡಿ, ದರೋಡೆಕೋರರಿಂದ ಪಾರಾಗಿದೆ. ಅಲ್ಲದೇ ಕೊರೊನಾ ವೈರಸ್ ಸೋಂಕಿನ ನಂತರದಲ್ಲಿ ತಿರುಪತಿ ತಿರುಮಲ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಭಕ್ತರನ್ನೇ ಟಾರ್ಗೆಟ್ ಮಾಡಿ ದರೋಡೆಕೋರರ ತಂಡ ದುಷ್ಕøತ್ಯವನ್ನೆಸಗುತ್ತಿದೆ ಎನ್ನಲಾಗುತ್ತಿದೆ. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.