Recent Posts

Sunday, January 19, 2025
ಹೆಚ್ಚಿನ ಸುದ್ದಿ

ಜನತೆಗೆ ಕೋವ್ಯಾಕ್ಸಿನ್ ಬಗ್ಗೆ ಮಾಹಿತಿ ಕೊರತೆ: ಎರಡು ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ – ಕಹಳೆ ನ್ಯೂಸ್

ನವದೆಹಲಿ: ಕೊರೊನಾ ಲಸಿಕಾ ಅಭಿಯಾನದ ನಿರ್ವಹಣೆಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆಯಲ್ಲಿ ತಮಿಳುನಾಡು ಮತ್ತು ಕೇರಳವನ್ನು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯ ಕಾರ್ಯಕರ್ತರಿಗೆ ಲಸಿಕಾ ಅಭಿಯಾನದಲ್ಲಿ ಮೊದಲ ಆದ್ಯತೆಯನ್ನು ನೀಡಿದ್ದುˌ ಈ ಎರಡು ರಾಜ್ಯದಲ್ಲಿ ಶೇ. 25 ಕ್ಕೂ ಕಡಿಮೆ ಸಂಖ್ಯೆಯಲ್ಲಿ ಆರೋಗ್ಯ ಕಾರ್ಯಕರ್ತರು ಭಾಗವಹಿಸಿದ್ದಾರೆ. ಪ್ರತಿದಿನವೂ ಲಸಿಕಾ ಅಭಿಯಾನದ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸುತ್ತಿದ್ದು ಈ ಮೂಲಕ ತಮಿಳುನಾಡು ಹಾಗೂ ಕೇರಳದ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಹಿಂದೇಟು ಹಾಕುವ ಬಗ್ಗೆ ತಿಳಿದುಬಂದಿದೆ. ಪಂಜಾಬ್ ˌ ಛತ್ತೀಸ್ ಗಡದಲ್ಲೂ ಕಳಪೆ ನಿರ್ವಹಣೆ ಮಾಡಿದ್ದು ಈ ಎಲ್ಲಾ ರಾಜ್ಯಗಳಿಗೆ ಲಸಿಕೆಯ ಪ್ರಯೋಜನಗಳ ಬಗೆಗೆ ಆತ್ಮವಿಶ್ವಾಸ ಮೂಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಕರ್ನಾಟಕ ˌಅಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ 70 ಶೇಕಡಾ ಯಶಸ್ವಿಯಾಗಿದ್ದುˌ ಕರ್ನಾಟಕˌ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಲಸಿಕೆ ನೀಡುವ ಸ್ಥಳದಲ್ಲಿಯೇ ಆರೋಗ್ಯ ಇಲಾಖೆಯ ಅಧಿಕಾರಿಗಳು ವೈದ್ಯಕೀಯ ಉಸ್ತುವಾರಿ ˌ ನಿರ್ದೇಶಕˌ ವೈದ್ಯಕೀಯ ಕಾಲೇಜಿನ ಪ್ರಿನ್ಸಿಪಾಲರೊಂದಿಗೆ ಕುಳಿತು ಲಸಿಕೆಯ ಕುರಿತು ಅರಿವು ಮೂಡಿಸುವ ಮೂಲಕ ಲಸಿಕೆ ಬಗ್ಗೆ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದೆ ಎಂದು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು