ಮೈಸೂರು: ಕರ್ನಾಟಕವು ಶೈಕ್ಷಣಿಕ ಕ್ಷೇತ್ರದಲ್ಲಿ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ದೂರನ ಶಿಕ್ಷಣದಲ್ಲೂ ಬದಲಾವಣೆಯನ್ನು ತಂದಿದೆ.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೂಲಕವೇ ದೂರ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಮುಕ್ತ ವಿಶ್ವವಿದ್ಯಾಲಯದ ಭೌತಿಕ ತರಗತಿಗಳ ಆರಂಭಕ್ಕೆ ವರ್ಚುವಲ್ ವೇದಿಕೆ ಮೂಲಕ ಬೆಂಗಳೂರಿನಿಂದಲೇ ಚಾಲನೆ ನೀಡಿ ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿದ್ದರೆ. ಆನ್‌ಲೈನ್ ಶಿಕ್ಷಣ ವ್ಯವಸ್ಥೆಗೆ ಬರುವ ದಿನಗಳಲ್ಲಿ ಭಾರಿ ಬೇಡಿಕೆ ಬರಲಿದ್ದು, ಬದಲಾವಣೆಯೊಂದಿಗೆ ವಿದ್ಯಾರ್ಥಿಗಳ ಅಪೇಕ್ಷೆ ಮೇರೆಗೆ ಭೋದನೆ ಮಾಡುವುದು ಸರ್ಕಾರದ ಕರ್ತವ್ಯ ಈ ನಿಟ್ಟಿನಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯಕ್ಕೆ ಇನ್ನಷ್ಟು ಪ್ರೇರಣೆಯೊಂದಿಗೆ ತಾಂತ್ರಿಕವಾಗಿ ಮೇಲ್ಮಟ್ಟಕ್ಕೆ ಕೊಡೊಯ್ಯಲಾಗುತ್ತದೆ ಎಂದು ವಿಶ್ವಾಸವಿತ್ತರು. ದೂರ ಶಿಕ್ಷಣಕ್ಕೆ ಈ ಮೊದಲೇ ಕಾಯ್ದೆ ಜಾರಿಗೆ ತರಲಾಗಿತ್ತು. ಸದಕ್ಕೆ ಸರ್ಕಾರದ ಸಹಕಾರವು ಇದೆ ಎಂದು ಭರವಸೆ ಇತ್ತರು. ಕೊರೋನಾ ನಂತರದ ಶಿಕ್ಷಣ ಪದ್ಧತಿಯಲ್ಲಿ ಅನೇಕಾರು ಬದಲಾವಣೆ ಆಗಿದ್ದು,ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಲಿಕೆ ಮಾಡುವ ವ್ಯವಸ್ಥೆ ಹೆಚ್ಚು ಪ್ರಮುಖ್ಯತೆಯನ್ನು ಪಡೆದಿವೆ. ವಿದ್ಯಾರ್ಥಿಗಳ ಹಾಜರಿ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳ ಮುಂದೆ ಎರಡು ಅವಕಾಶವನ್ನು ಮುಂದಿಡುತ್ತಾ ನೇರ ಇಲ್ಲವೇ ಅನ್ಲೈನ್ ತರಗತಿಗಳ ಮೂಲಕ ಕಲಿಯಬಹುದು ಎಂದರು. ಈ ಸಂದರ್ಭದಲ್ಲಿ ಮುಕ್ತ ವಿವಿ ಕುಲಪತಿ ಡಾ.ವಿದ್ಯಾಶಂಕರ್, ಕುಲಸಚಿವ ಡಾ.ಲಿಂಗರಾಜ ಗಾಂಧಿ, ಮೌಲ್ಯಮಾಪನ ಕುಲಸಚಿವ ಅಶೋಕ ಕಾಂಬ್ಳೆ ಸೇರಿದಂತೆ ವಿವಿಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.