Monday, November 25, 2024
ಹೆಚ್ಚಿನ ಸುದ್ದಿ

ಭವಿಷ್ಯದಲ್ಲಿ ಜಾಗತಿಕ ಜೀವವೈವಿಧ್ಯ ಮತ್ತು ಆಹಾರ ಸುರಕ್ಷತೆಯ ಮೇಲೆ ಗಂಡಾಂತರ–ಕಹಳೆ ನ್ಯೂಸ್

ನವದೆಹಲಿ: ನೇಚರ್ ಕ್ಲೈಮೇಟ್ ಚೇಂಜ್ ಜರ್ನಲ್‌ನಲ್ಲಿ ಭವಿಷ್ಯದ ಹವಾಮಾನ ಬದಲಾವಣೆಯ ಸಾಧ್ಯತೆಯಿಂದ ಉಷ್ಣವಲಯ ಮಳೆಗಾಲದ ಅವಧಿಯಲ್ಲಿ ಏರುಪೇರಾಗಲಿದ್ದು ಇದರಿಂದ ಭಾರತದ ಕೆಲವು ಕಡೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ಮುನ್ಸೂಚನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅಧ್ಯಯನದಲ್ಲಿ ಹಲವು ಬಗೆಯ ಹವಾಮಾನವಿರುವ ೨೭ ಮಾದರಿಗಳು ಕಂಪ್ಯೂಟರ್ ಸಿಮ್ಯುಲೇಷನ್ (ತಂತ್ರಾಂಶ)ದಲ್ಲಿ ಪರಿಶೀಲಿಸಲಾಗಿದೆ.
ಪೂರ್ವ ಆಫ್ರಿಕಾ ಮತ್ತು ಹಿಂದೂ ಮಹಾಸಾಗರದ ಮೇಲೆ ಉಷ್ಣವಲಯದ ಮಳೆಗಾಲದ ಅವಧಿಯಲ್ಲಿ ಏರುಪೇರಾಗಲಿದೆ ಎಂದು ಸಂಶೋಧನೆಯ ಪ್ರಕಾರ ತಿಳಿದು ಬಂದಿದ್ದು, ದಕ್ಷಿಣ ಭಾರತದಲ್ಲಿ ಪ್ರವಾಹ ತೀವ್ರಗೊಳ್ಳಲು ಕಾರಣವಾಗಬಹುದು. ೨೧೦೦ರ ವೇಳೆಗೆ ಜಾಗತಿಕ ಜೀವವೈವಿಧ್ಯ ಮತ್ತು ಆಹಾರ ಸುರಕ್ಷತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಶತಮಾನದ ಅಂತ್ಯದವರೆಗೂ ಉಂಟಾಗಬಹುದಾದ ಹಸಿರುಮನೆ ಅನಿಲಗಳ ಪರಿಣಾಮದಿಂದ ಭವಿಷ್ಯದಲ್ಲಿ ಉಷ್ಣವಲಯದ ಮಳೆ ಬೀಳುವ ಜಾಗದಲ್ಲಿ ವ್ಯತ್ಯಾಸಗಳು ಉಂಟಾಗಬಹುದು ಎಂದು ಸೂಚಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು