ಚಿಕ್ಕಾಬಳ್ಳಾಪುರ ನಗರದಲ್ಲಿ ಹೆತ್ತ ಮಗುವನ್ನು ಮಾರಾಟ ಮಾಡಿ ಜೈಲುಪಾಲಾದ ತಾಯಿ ಮತ್ತು ಸಹಚರರು-ಕಹಳೆ ನ್ಯೂಸ್
ಚಿಕ್ಕಬಳ್ಳಾಪುರ : ಚಿಕ್ಕಾಬಳ್ಳಾಪುರ ನಗರದಲ್ಲಿ ಹೆತ್ತ ಮಗುವನ್ನ ಮಾರಾಟ ಮಾಡಿದ ತಾಯಿ ಜೈಲುಪಾಲಾದ ಘಟನೆ ನಡೆದಿದೆ. ತಾರೀಕು 24-05-2020 ರಂದು ಚಿಕ್ಕಾಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಪ್ರಭಾಕರ್ ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಹೊಸಹಳ್ಳಿ ಗ್ರಾಮದ ಚಂದನಳನ್ನು ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.
ಆದರೆ ದಂಪತಿಗೆ ಮದುವೆಯಾದ ಮೂರು ತಿಂಗಳಲ್ಲೇ ಅಂದರೆ ಸೆಪ್ಟೆಂಬರ್ 21, 2020 ರಂದು ಚಿಕ್ಕಾಬಳ್ಳಾಪುರ ಜಿಲ್ಲಾಸ್ವತ್ರೆಯಲ್ಲಿ ಪತ್ನಿ ಚಂದನ ಮಗುವಿಗೆ ಜನ್ಮ ನೀಡಿದ್ದಳು. ಇದ್ರಿಂದ ಅನುಮಾನಗೊಂಡ ಪತಿ, ಹುಟ್ಟಿದ ಮಗು ನನ್ನದಲ್ಲ ಅಂತ ಖ್ಯಾತೆ ತೆಗೆದು ಪತ್ನಿ ಮಗುವನ್ನು ವಾಪಸ್ ತವರಿಗೆ ಕಳಿಸಿದ್ದಾನೆ.
ಆದರೆ ಪತ್ನಿ ಚಂದನಾ ತವರು ಮನೆಗೆ ಹೋಗುವಾಗ ಮಗುವನ್ನು ದಂಪತಿಯೊಬ್ಬರಿಗೆ ಮಾರಾಟ ಮಾಡಿ ತವರು ಮನೆ ಸೇರಿದ್ದಳು. ಇದಾದ 5 ತಿಂಗಳ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ದಾಖಲಾಗಿದೆ.
ದೂರಿನನ್ವಯದಂತೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದಾಗ ಮಗು ಮಾರಾಟ ಮಾಡಿರುವ ವಿಷಯ ಬಯಲಾಗಿದ್ದು, ನಂತರ ಚಂದನಾ ಮಗುವನ್ನು ಬೆಂಗಳೂರು ನಗರ ಜಿಲ್ಲೆಯ ಬಾಗಲೂರಿನ ಮಲ್ಲೇಶ್ ಮತ್ತು ರೂಪಾ ದಂಪತಿಗೆ ಮಾರಾಟ ಮಾಡಿರೋದಾಗಿ ತಿಳಿದುಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಚಿಕ್ಕಾಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಾಗೇ ಮಗುವನ್ನು ಮಾರಾಟ ಮಾಡಿದ ತಾಯಿ ಚಂದನಾ, ಮತ್ತು ಚಂದನಾ ತಂದೆ ನಾಗರಾಜ್ ಆಕೆಯ ತಾಯಿ ನಾಗಮಣಿ ಹಾಗೂ ಅಕ್ರಮವಾಗಿ ದತ್ತು ಪಡೆದ ರೂಪವತಿಯನ್ನು ಬಂಧನ ಮಾಡಲಾಗಿದೆ. ಹಾಗೆ ಮಲ್ಲೇಶ್ ತಲೆ ಮಾರೆಸಿಕೊಂಡಿದ್ದು, ಚಿಕ್ಕಾಬಳ್ಳಾಪುರ ಮಹಿಳಾ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ. ಮಗುವನ್ನು ರಕ್ಷಣೆ ಮಾಡಿರುವ ಅಧಿಕಾರಿಗಳು ಚಿಕ್ಕಾಬಳ್ಳಾಪುರ ನಗರದ ಮಕ್ಕಳ ಪಾಲನಾ ಕೇಂದ್ರದಲ್ಲಿ ಇರಿಸಲಾಗಿದ್ದು ಹಾರೈಕೆ ಮಾಡುತ್ತಿದ್ದಾರೆ.