Thursday, January 23, 2025
ಹೆಚ್ಚಿನ ಸುದ್ದಿ

ನಾಲ್ಕು ವರ್ಷದ ಪ್ರೀತಿಯ ಮದುವೆಗೆ ಪೋಷಕರಿಂದ ವಿರೋಧ; ನೇಣಿಗೆ ಶರಣಾದ ಪ್ರೇಮಿಗಳು- ಕಹಳೆ ನ್ಯೂಸ್

ಯಾದಗಿರಿ : ಮನೆಯಲ್ಲಿರುವ ಕಬ್ಬಿಣದ ಪೈಪ್ ಗೆ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗುಂಡಗುರ್ತಿ ಗ್ರಾಮದ 23 ವರ್ಷದ ಶರಣಬಸವ ಹಾಗೂ 19 ವರ್ಷದ ಶೇಖಮ್ಮ ಕಳೆದ ನಾಲ್ಕು ವರ್ಷಗಳಿಂದ ಪರಸ್ವರ ಗಾಡವಾಗಿ ಪ್ರೀತಿಸುತ್ತಿದ್ದರು.

ಆದರೆ ಇವರಿಬ್ಬರ ಪ್ರೀತಿಗೆ ಎರಡು ಮನೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಂತೆ ಹಾಗಾಗಿ ಇದರಿಂದ ಮನನೊಂದ ಪ್ರೇಮಿಗಳು ಮನೆಯಲ್ಲೇ ಕಬ್ಬಿಣದ ಪೈಪ್ ಗೆ ಹಗ್ಗದಿಂದ ನೇಣು ಬಿಗಿದುಕೊಂಡು ಬಾರದ ಲೋಕಕ್ಕೆ ತೆರಳಿದ್ದಾರೆ.

ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಯಾದಗಿರಿ ಎಸ್ಪಿ ಋಷಿಕೇಶ್ ಭಗವಾನ್ ಮತ್ತು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಅವರು ಪರಿಶೀಲನೆ ಮಾಡಿದ್ದಾರೆ.

ಹಾಗೇ ಪ್ರಕರಣ ದಾಖಲಿಸಿಕೊಂಡಿರುವ ಶಹಾಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.