Thursday, January 23, 2025
ಹೆಚ್ಚಿನ ಸುದ್ದಿ

ಮಂಜು ಮುಸುಕಿದ ರಸ್ತೆಯಲ್ಲಿ ನಡೆದ ಭೀಕರ ಅಪಘಾತ, 13 ಸಾವು; ಟ್ರಕ್ ಚಾಲಕ ಪೊಲೀಸರ ವಶ -ಕಹಳೆ ನ್ಯೂಸ್

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯ ದುಫ್‌ಗುರಿ ನಗರದಲ್ಲಿ ಸರಣಿ ಅಪಘಾತ ನಿನ್ನೆ ರಾತ್ರಿ ನಡೆದಿದೆ. ಮಂಜು ಮುಸುಕಿದರಿಂದ ರಸ್ತೆ ಸರಿಯಾಗಿ ಕಾಣದೇ ಈ ಭೀಕರ ಅಪಘಾತ ಸಂಭವಿಸಿ, 13 ಜನ ಸಾಪನ್ನಪ್ಪಿದ್ದು,18 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರಿಯಾಗಿ ಕಾಣದ ಈ ರಸ್ತೆಯಲ್ಲಿ ಬಂಡೆಗಲ್ಲು ತುಂಬಿದ ಟ್ರಕ್ ಮೊದಲಿಗೆ ವಾಹನವೊಂದಕ್ಕೆ ಡಿಕ್ಕಿ ಹೊಡೆದಿತ್ತು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಬಲಭಾಗಕ್ಕೆ ಉರುಳಿಬಿದ್ದಿದೆ. ಈ ಸಂದರ್ಭದಲ್ಲಿ ಟ್ರಕ್‌ನಲ್ಲಿದ್ದ ಬಂಡೆಗಲ್ಲು ಉರುಳಿ ಬಿದ್ದ ಪರಿಣಾಮ ಟ್ರಕ್‌ನ ಮುಂದೆ ಇದ್ದಂತಹ ಚಿಕ್ಕ ಲಾರಿಗೆ ಹಾನಿಯಾಗಿದ್ದು ಒಟ್ಟು 4 ವಾಹನಗಳಿಗೆ ಹಾನಿಯಾಗಿದೆ ಎಂದು ಜಲ್‌ಪೈಗುರಿಯ ಸಹಾಯಕ ಪೋಲಿಸ್ ವರಿಷ್ಠಾಧಿಕಾರಿ ಸುಮಂತ್ ರಾಯ್ ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ದುಪ್‌ಗಿರಿಯ ಸರ್ಕಲ್ ಇನ್ಸ್ಪೆಕ್ಟರ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕ್ರೇನ್‌ಗಳನ್ನು ತರಿಸಿ ವಾಹನಗಳನ್ನು ತೆರವು ಮಾಡಿಸಲಾಯಿತು. ಮಂಜು ಮುಸುಕಿದ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಹೇಳಿದ್ದಾರೆ. ಘಟನೆಯಲ್ಲಿ ಟ್ರಕ್ ಚಾಲಕ ಪ್ರಣಾಪಾಯದಿಂದ ಪಾರಾಗಿದ್ದು, ಪೊಲೀಸರು ಅತನನ್ನು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು