Tuesday, November 26, 2024
ಪುತ್ತೂರು

ಪುತ್ತೂರು ಅಂಬಿಕಾ ವಿದ್ಯಾಲಯದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಛಲ, ಆತ್ಮ ವಿಶ್ವಾಸ, ಶ್ರದ್ಧೆ, ಸಮರ್ಪಣಾ ಮನೋಭಾವ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ವಿದ್ಯಾರ್ಥಿಗಳಲ್ಲಿ ವಿದ್ಯಾರ್ಜನೆ ಸಮಯದಲ್ಲಿ ಇದು ಅನಿವಾರ್ಯವಾಗಿ ಇರಬೇಕಾದ  ಉನ್ನತ ವಿಚಾರಗಳು; ಎಂದು ಅಭ್ಯಾಸಕ್ಕೆ ಉಪಯುಕ್ತವಾದಂತಹ ಪುಸ್ತಕಗಳನ್ನು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಉಪನ್ಯಾಸಕರು ಸ್ವತಃ ಸಿದ್ಧಪಡಿಸಿ ಬಿಡುಗಡೆಗೊಳಿಸುವ ಸುಸಂದರ್ಭದಲ್ಲಿ ಪುತ್ತೂರಿನ ಖ್ಯಾತ ಮಕ್ಕಳ ತಜ್ಞ ಡಾ.ಶ್ರೀಕಾಂತ್ ರಾವ್ ತಮ್ಮ ದಿವ್ಯಹಸ್ತದಿಂದ ಪುಸ್ತಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.


ನಟ್ಟೋಜ ಫೌಂಡೇಶನ್ ಟ್ರಸ್ಟ್  ವತಿಯಿಂದ ನಡೆಸಲ್ಪಡುವ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಧನೆಯ ಪಥದಲ್ಲಿ ಸಾಗಿದ ವಿಶೇಷ ಸಾಧಕರನ್ನು ಎಂದೆಂದೂ ಎಲ್ಲರೂ ಸ್ಮರಿಸಿಕೊಳ್ಳುತ್ತಾರೆ ಎಂದು ಕಾರ್ಯಕ್ರಮದ ಅಧ್ಯಕ್ಷ ಪೀಠವನ್ನಲಂಕರಿಸಿದ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳ ನಿರ್ದೇಶಕ, ಹಿರಿಯ ಅನುಭವಿ, ವಿಶ್ರಾಂತ ಶಿಕ್ಷಕರೂ ಆದ ಶ್ರೀ ಸುರೇಶ ಶೆಟ್ಟಿಯವರು ಅಭಿನಂದಿಸಿ ಶುಭಹಾರೈಸಿದರು. ಸಂಸ್ಥೆಯ ಪ್ರಾಚಾರ್ಯರಾದ ರಾಜಶ್ರೀ ಎಸ್ ನಟ್ಟೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಚಾರ್ಯರಾದ ಸತ್ಯಜಿತ್ ಉಪಾಧ್ಯಾಯ ಇವರು ಕಾರ್ಯಕ್ರಮ ನಿರೂಪಿಸಿದರು. ಮುರಳಿ ಮೋಹನ ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು