ಭಾರತ ಸರ್ಕಾರದಿಂದ ವಾಟ್ಸಾಆ್ಯಪ್‍ಗೆ ಸೇವಾ ನಿಯಮ ಮತ್ತು ಗೌಪ್ಯತೆ ನೀತಿಯಲ್ಲಿ ಏಕಪಕ್ಷೀಯ ಬದಲಾವಣೆಯ ಕುರಿತು 14 ಪ್ರಶ್ನೆ-ಕಹಳೆ ನ್ಯೂಸ್
ನವದೆಹಲಿ : ಭಾರತ ಸರ್ಕಾರವು ವಾಟ್ಸಾಆ್ಯಪ್ ಗೆ ಸೇವಾ ನಿಯಮ ಮತ್ತು ಗೌಪ್ಯತೆ ನೀತಿಯಲ್ಲಿ ಏಕಪಕ್ಷೀಯ ಬದಲಾವಣೆಯ ಕುರಿತು ಮಂಗಳವಾರ 14 ಪ್ರಶ್ನೆಗಳನ್ನು ಕೇಳಿದೆ.
ವಾಟ್ಸಾಆ್ಯಪ್ ಗೌಪ್ಯತೆ ನೀತಿಯ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರ ಕೇಳಿದ ದಿನದ ನಂತರ ಫೇಸ್ ಬುಕ್‍ಯೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವ ಸಾಮಥ್ರ್ಯ ವಿಸ್ತರಿಸುವ ಆಲೋಚನೆ ಹೊಂದಿಲ್ಲ ಮಾತ್ರವಲ್ಲದೆ ಈ ವಿಷಯದ ಕುರಿತು ಪ್ರಶ್ನೆಗಳಿಗೆ ಉತ್ತರಿಸಲು ನಾವು ಮುಕ್ತವಾಗಿದ್ದೇವೆ ಎಂದು ವಾಟ್ಸಾಆ್ಯಪ್ ಹೇಳಿದೆ. ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಹೊಸ ಆಯ್ಕೆಗಳನ್ನು ಒದಗಿಸುವ ಉದ್ದೇಶ ಹೊಂದಿದೆಯೇ ವಿನಃ ಹೊಸ ಬದಲಾವಣೆಯಿಂದ ಫೇಸ್‍ಬುಕ್‍ನೊಂದಿಗೆ ಡೇಟಾವನ್ನು ಹಂಚಿಕೊಳ್ಳುವ ಮೂಲಕ ಸಾಮಥ್ರ್ಯವನ್ನು ವಿಸ್ತರಿಕೊಳ್ಳುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿತು. ಹಾಗೆಯೇ ತಮ್ಮ ಗ್ರಾಹಕರಿಗೆ ಹೆಚ್ಚಿನ ಸೇವೆಗಳನ್ನು ನೀಡುವ ಮೂಲಕ ವಾಟ್ಸಾಆ್ಯಪ್ ಇನ್ನಷ್ಟು ಬೆಳೆಯಲು ಸಹಕಾರಿಯಾಗಬಹುದು ಎಂದು ವಾಟ್ಸಾಆ್ಯಪ್ ವಕ್ತಾರರು ತಿಳಿಸಿದ್ದಾರೆ. ವೈಯುಕ್ತಿಕ ಸಂದೇಶಗಳನ್ನು ವಾಟ್ಸಾಆ್ಯಪ್ ಎಂಡ್ ಟು ಎಂಡ್ ಮೂಲಕ ಎನ್ಕ್ರಿಪ್ಸನ್ನೊಂದಿಗೆ ಭದ್ರಗೊಳಿಸುವುದರೊಂದಿಗೆ ವಾಟ್ಸಾಆ್ಯಪ್ ಅಥವಾ ಫೇಸ್‍ಬುಕ್‍ನಿಂದ ಗೌಪ್ಯತೆಗೆ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿತು. ಹಾಗೆಯೇ ತಪ್ಪು ಮಾಹಿತಿಗಳು ರವಾನೆಯಾಗುವುದನ್ನು ತಪ್ಪಿಸಲು ಹೊಸ ಫೀರ್ಸ್ ತರಲು ಯತ್ನಿಸುತ್ತಿದ್ದು, ಭಾರತದ ಯಾವುದೇ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಲು ಸಿದ್ಧರಿದ್ದೇವೆ ಎಂದು ಹೇಳಿದೆ. “ಜಾಗತಿಕವಾಗಿ ವಾಟ್ಸಾಆ್ಯಪ್ ಅತಿದೊಡ್ಡ ಬಳಕೆದಾರರ ನೆಲೆಯಾಗಿರುವ ಮತ್ತು ಅದರ ಸೇವೆಗಳಿಗೆ ದೊಡ್ಡ ಮಾರುಕಟ್ಟೆಯಾಗಿರುವ ಭಾರತ. ವಾಟ್ಸಾಆ್ಯಪ್ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿ ಪ್ರಸ್ತಾಪಿತ ಬದಲಾವಣೆಗಳು “ಭಾರತೀಯ ನಾಗರಿಕರ ಆಯ್ಕೆ ಮತ್ತು ಸ್ವಾಯತ್ತತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಕಳವಳವಿದೆ.” ಪತ್ರದಲ್ಲಿ ವಿವರಿಸಲಾಗಿದೆ. ಭಾರತ ಸರ್ಕಾರ ವಾಟ್ಸಾಆ್ಯಪ್ ಸಿಇಒ ವಿವಿಲ್ ಕ್ಯಾಥ್ಕಾಟ್ರ್ಗೆ ಬರೆದಿರುವ ಪತ್ರದಲ್ಲಿ ವಾಟ್ಸಾಆ್ಯಪ್ ಗೌಪ್ಯತೆ ನೀತಿಯಲ್ಲಿ ಇತ್ತೀಚಿನ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ, ಏಕಪಕ್ಷೀಯ ಬದಲಾವಣೆ ನ್ಯಾಯಯುತ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.