ನಾವೆಲ್ಲರೂ ಜೀವನದಲ್ಲಿ ಹಲವು ಮೆಟ್ಟಿಲು ಹತ್ತುತ್ತ ಹಲವಾರು ಜನರೊಂದಿಗೆ ಬೆರೆಯುತ್ತಿವೆ. ಜೀವನದಲ್ಲಿ ಸಿಕ್ಕ ಹಲವು ಜನರಲ್ಲಿ ಕೆಲವರು ನಿಜವಾದ ಸ್ನೇಹಿತರಾಗುತ್ತಾರೆ ಮತ್ತು ಕೆಲವು ಶತ್ರುಗಳಾಗುತ್ತಾರೆ.
ಆದರೆ ಶತ್ರುಗಳನ್ನು ನಾವು ಯಾವತ್ತು ವಿರೋಧಿಗಳು ಎಂದು ಭಾವಿಸಬಾರದು ಅವರು ನಮ್ಮ ಅಭಿಮಾನಿಗಳು. ಏಕೆಂದರೆ ದಿನದ 24 ಗಂಟೆಯೂ ನಮ್ಮ ಬಗ್ಗೆ ಯೋಚಿಸುತ್ತ ನಮ್ಮನ್ನು ಹೇಗೆ ತಡೆಯುವುದು ಮತ್ತು ನಮ್ಮನ್ನು ಹೇಗೆ ಸಮಸ್ಯೆಗೆ ಸಿಕ್ಕಿಸುವುದು. ಅನ್ನುವ ಬಗ್ಗೆ ವಿಚಾರ ಮಾಡುತ್ತಿರುತ್ತಾರೆ. ಅದಕ್ಕಾಗಿ ದಿನದ 24 ಗಂಟೆ ನಮ್ಮ ಬಗ್ಗೆ ಯೋಚನೆ ಮಾಡುವವರು ನಮ್ಮ ವಿರೋಧಿಗಳಲ್ಲ ಅವರ ನಮ್ಮ ಅಭಿಮಾನಿಗಳು. ಶತ್ರುಗಳು ನಮ್ಮ ಮನೆಯೊಳಗೆ ಮತ್ತು ಹೊರಗಡೆಯೂ ಕೂಡ ಇದ್ದಾರೆ ನಮ್ಮನ್ನು ನೇರಾನೇರವಾಗಿ ವಿರೋಧಿಸುವುದು ಕೂಡ ನಮ್ಮ ಶತ್ರುಗಳು ಮತ್ತು ನಮಗೆ ಒಳ್ಳೆಯದನ್ನು ಮಾಡುತ್ತಿದ್ದೇವೆ ಎಂದು ನಟಿಸಿ ನಮ್ಮ ಬೆನ್ನಿಗೆ ಚೂರಿ ಹಾಕುವವರನ್ನು ನಾವು ಹಿತ ಶತ್ರುಗಳು ಅನ್ನಬಹುದು. ಮತ್ತು ನಾವು ಮಾಡುವ ಕೆಲಸದಲ್ಲಿ ನಮ್ಮ ಯಶಸ್ಸನ್ನು ಹೊಗಳುತ್ತಾ ನನ್ನ ಬೆನ್ನಿಗೆ ಚೂರಿ ಹಾಕುವವರು ಕೂಡ ನಮ್ಮ ಹಿತ ಶತ್ರುಗಳು ಅನ್ನಬಹುದು. ಅಣ್ಣನ ಏಳಿಗೆಯನ್ನು ಬಯಸದ ತಮ್ಮ, ಸಹೋದ್ಯೋಗಿಯ ಯಶಸ್ಸನ್ನು ಸಹಿಸದ ಇನ್ನೊಬ್ಬ ಸಹೋದ್ಯೋಗಿ, ಕುಟುಂಬದಲ್ಲಿನ ಅನ್ಯೋನ್ಯತೆಯನ್ನು ಸಹಿಸದ ಇನ್ನೊಬ್ಬ ಕುಟುಂಬಸ್ಥ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದಕ್ಕಾಗಿಯೇ ನಾವು ಜೀವನದಲ್ಲಿ ಯಾರ ಮೇಲೆಯೂ ಅವಲಂಬನೆ ಆಗದೆ ನಮ್ಮ ಸ್ವಂತ ಬಲದ ಮೇಲೆ ನಾವು ಪ್ರಗತಿ ಸಾಧಿಸಬೇಕಾಗಿದೆ. ಅದರಲ್ಲಿಯೂ ಹಿತ ಶತ್ರುಗಳ ಬಗ್ಗೆ ನಾವು ಅತ್ಯಂತ ಎಚ್ಚರ ವಹಿಸಬೇಕಾಗಿದೆ, ಏಕೆಂದರೆ ಅವರು ನಾವು ಮಾಡುವ ಯಾವುದೇ ಕೆಲಸವನ್ನು ಬೇಡ ಅನ್ನದೇ ನಮ್ಮ ಯಶಸ್ಸನ್ನು ಹೊಗಳುತ್ತಾ ನಮ್ಮ ಬೆನ್ನ ಹಿಂದೆಯೇ ನಮ್ಮನ್ನು ಮಣಿಸುವ ಹುನ್ನಾರಕ್ಕೆ ಅವರು ಕೈ ಹಾಕಿರುತ್ತಾರೆ. ಇವರನ್ನು ಈ ಕೆಳಗಿನ ಮಾರ್ಗದ ಮೂಲಕ ನಾವು ಗುರುತಿಸಬಹುದು. ನಮ್ಮ ಬಗ್ಗೆ ಗಾಸಿ ಪ್ಮಾಡುವವರು. ಉದಾಹರಣೆಗೆ, ನೀವು ನಿಜವಾಗಿಯೂ ಮೋಸ ಮಾಡದಿದ್ದಾಗ ನಿಮ್ಮ ಗೆಳೆಯನಿಗೆ ಮೋಸ ಮಾಡಿದ್ದೀರಿ ಎಂಬ ವದಂತಿಯನ್ನು ಅವರು ಹರಡಬಹುದು. ಮತ್ತು ಅವರ ಧರಿಸುವ ಚಿಹ್ನೆಗಳು ಮತ್ತು ಅವರು ಬಳಸುವ ವಸ್ತುಗಳಿಂದ ಕೂಡ ನಾವು ಅವರ ಮನಸ್ಸನ್ನು ಅರಿಯುವ ಮೂಲಕ ಶತ್ರುವನ್ನು ಗುರುತಿಸಬಹುದು. ಇನ್ನೊಂದು ಅತಿಸರಳ ವಿಧಾನವೆಂದರೆ ನಮ್ಮ ಮುಂದೆ ಮತ್ತೊಬ್ಬರ ಬಗ್ಗೆ ಮಾತನಾಡುವವರು ಇದೇ ರೀತಿಯ ಕೂಡ ನಮ್ಮ ಬಗ್ಗೆ ಇನ್ನೊಬ್ಬರ ಮುಂದೆ ಮಾತನಾಡುತ್ತಾರೆ ಎಂಬುದು ಸಾಮಾನ್ಯ ಸಂಗತಿ. ನಾವು ಏಕೆ ಇವತ್ತು ಶತ್ರುಗಳ ಬಗ್ಗೆ ಹೇಗೆ ಜಾಗೃತಗೊಳ್ಳಬೇಕು ಅಂದರೆ, ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಲ್ಲಿಯೂ ಬೆಳೆಯಬೇಕು ಎನ್ನುವ ಹಂಬಲ ಇದ್ದೇ ಇರುತ್ತದೆ ಆದ ಕಾರಣ ಹಲವು ಕೌಶಲ್ಯಗಳನ್ನು ಕಲಿಯುವತ್ತ ದೃಷ್ಟಿ ನೆಟ್ಟಿರುವ ನಾವು ಆದಷ್ಟು ಬೇಗ ಶತ್ರುವನ್ನು ಗುರುತಿಸುವ ಕೌಶಲ್ಯ ಕಲಿಯಬೇಕಾಗಿರುವುದು ಬಹಳ ಅವಶ್ಯಕವಾಗಿದೆ. ನಾನು ಹೇಳ ಹೊರಟಿರುವುದು ಏನೆಂದರೆ ದ್ವೇಷ ಅಸೂಯೆ ಭಾವನೆಯನ್ನು ಬಿಟ್ಟು ನಡೆದರೆ ಎಲ್ಲರೂ ಕೂಡ ಬೆಳೆಯಬಹುದು. ಒಂದು ಮಾತನ್ನು ಹೇಳಬೇಕೆಂದರೆ ನಿಮ್ಮ ವಿರೋಧಿಗಳು ನಿಮ್ಮ ಮನೆ ಬಾಗಿಲಿಗೆ ಬಂದಾಗ ನಗುನಗುತಾ ಅವರನ್ನು ಸ್ವಾಗತಿಸಿ ಏಕೆಂದರೆ ಒಂದು ಮರವನ್ನು ಕಡಿಯಲು ಬರುವ ಜನರಿಗೂ ಕೂಡ ಮರವು ನೆರಳನ್ನು ನೀಡಿ ಸ್ವಾಗತಿಸುತ್ತದೆ. ಎಂದು ಲೇಖಕರು ಪ್ರೊ ಧರ್ಮರಾಜ್ಕುಂಬಾರ್ ಪದವಿ ವಿಭಾಗದ ಮುಖ್ಯಸ್ಥರು ಶ್ರೀ ಸಂಗಮೇಶ್ವರ ಬಿಸಿಎ ಮಹಾವಿದ್ಯಾಲಯ ಚಡಚಣ ಇವರು ಲೇಖನವನ್ನು ಬರೆದಿದ್ದಾರೆ.