ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಪತ್ರಿಕಾಗೋಷ್ಠಿ ಕುತೂಹಲ ಮೂಡಿಸಿದ್ದು, ಈಗಾಗಲೇ ಸಚಿವ ಸ್ಥಾನದ ವಿಚಾರ ಕುರಿತು ಅಸಮಾಧಾನಗೊಂಡಿದ್ದ ಬೆಲ್ಲದ ಇಂದು ದಿಡೀರ್ ನೇ ಸುದ್ದಿಗೋಷ್ಠಿ ಕರೆದಿದ್ದಾರೆ.
ಇತ್ತೀಚೆಗಷ್ಟೇ ವಿಸ್ತರಣೆಯಾದ ಸಚಿವ ಸಂಪುಟದಲ್ಲಿ ಸಚಿವಾಕಾಂಕ್ಷಿ ಆಗಿದ್ದ ಬೆಲ್ಲದಗೆ ನಿರಾಸೆ ಆಗಿದ್ದು, ಈ ಒಂದು ವಿಚಾರ ಕುರಿತು ದೆಹಲಿಗೆ ತೆರಳಿ ಮಾತನಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳ ವಿರುದ್ದ ಬಹಿರಂಗವಾಗೇ ಅಸಮಾಧಾನ ಹೊರ ಹಾಕಿದ್ದರು. ಅಲ್ಲದೇ ಹೈ ಕಮಾಂಡ್ ನೊಂದಿಗೆ ಮಾತನಾಡುವುದಾಗಿ ಕೂಡ ಹೇಳಿ, ಏಕಾಏಕಿ ಪತ್ರಿಕಾಗೋಷ್ಠಿಯನ್ನು ಕರೆದು ಕುತೂಹಲ ಮೂಡಿಸಿದ್ದಾರೆ.