ಕರೀಂನಗರದ ಹುಜುರಾಬಾದ್ನಲ್ಲಿ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯಿಂದ ತನ್ನ ಪತ್ನಿ ಮತ್ತು ಮಗಳ ಕೊಲೆ-ಕಹಳೆ ನ್ಯೂಸ್
ಕರೀಂನಗರದ ಹುಜುರಾಬಾದ್ನಲ್ಲಿ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗಳನ್ನು ಕಬ್ಬಿಣದ ರಾಡ್ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೌಟುಂಬಿಕ ಕಲಹ ಹಾಗೂ ಆಸ್ತಿ ವಿವಾದವೇ ತಾಯಿ ಮಗಳ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕರೀಂ ನಗರ ಪಟ್ಟಣದ ಸೈರುಪಾ ಗಾರ್ಡನ್ನ ಹಿಂದಿನ ಬೀದಿಯಲ್ಲಿರುವ ಮನೆಯೊಂದರಲ್ಲಿ ಆಟೋ ಚಾಲಕ ಕೊಕ್ಕಿಸಾಲ ವೆಂಕಟೇಶ್ ಹಾಗೂ ಆತನ 45 ಪ್ರಾಯದ ಪತ್ನಿ ರಮಾ ಹಾಗೂ 24 ವರ್ಷದ ಮಗಳು ಅಮಾನಿ ವಾಸಿಸುತ್ತಿದ್ದರು. ವೆಂಕಟೇಶ್ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಜೀವನ ನಡೆಸುತ್ತಿದ್ದನು. ಇತನಿಗೆ ರಮಾ ಎರಡನೇಯ ಪತ್ನಿಯಾಗಿದ್ದು. ಮನೆಯ ಆಸ್ತಿಯೆಲ್ಲವೂ ರಮಾ ಹೆಸರಲ್ಲಿತ್ತು. ಆಸ್ತಿಯನ್ನೆಲ್ಲಾ ತನ್ನ ಹೆಸರಿಗೆ ಬರೆದುಕೊಡುವಂತೆ ವೆಂಕಟೇಶ್ ಆಗಾಗ ತಗಾದೆ ತೆಗೆಯುತ್ತಿದ್ದನು. ಇದರಿಂದಾಗಿ ಮನೆಯಲ್ಲಿ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ನಿನ್ನೆ ಕೂಡ ದಂಪತಿಗಳ ನಡುವೆ ಕೌಟುಂಬಿಕ ಕಲಹ ನಡೆದಿದ್ದು, ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ವೆಂಕಟೇಶ್ ರಮಾ ಹಾಗೂ ಅವಾನಿ ತಲೆ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾನೆ. ಸುದ್ಧಿ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಅಧಿಕಾರಿಗಳು, ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದು, ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಅಧಿಕಾರಿಗಳು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.