Friday, January 24, 2025
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ‘ಜೀವನ ಕೌಶಲ್ಯಗಳು’ ಸರ್ಟಿಫಿಕೇಟ್ ಕೋರ್ಸ್ ಆರಂಭ , ಅವಕಾಶಗಳ ಸದ್ಭಳಕೆ ಸಾಧನೆಯ ಹಾದಿಗೆ ಮೆಟ್ಟಿಲುಗಳಿದ್ದಂತೆ; ಶ್ರೀನಿಧಿ ಭಟ್.-ಕಹಳೆ ನ್ಯೂಸ್

ಪುತ್ತೂರು : ಉದ್ಯೋಗ ಬದುಕನ್ನು ಕಟ್ಟಿಕೊಳ್ಳಲು ವಿವಿಧ ಜೀವನ ಕೌಶಲ್ಯಗಳು ಅವಶ್ಯಕ. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಿಗುವ ಅವಕಾಶಗಳು ಅನೇಕ. ಸಂವಹನ ಕಲೆ ಹಾಗೂ ಸಮೂಹ ಸಂವಹನ ಮಾಧ್ಯಮಗಳ ಸದ್ಭಳಕೆ ಸಾಧನೆಯ ಹಾದಿಗೆ ಮೆಟ್ಟಿಲುಗಳಿದ್ದಂತೆ. ಯಾವುದೇ ಕೆಲಸವಾದರೂ, ನಮಗೆ ಕೆಲಸವಿತ್ತ ಸಂಸ್ಥೆಯ ಮೆಚ್ಚುಗೆ ಪಡೆಯುವ ರೀತಿಯಲ್ಲಿ ಆ ಕೆಲಸ ಪೂರ್ಣಗೊಳಿಸುವುದು ಮುಖ್ಯವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದೇ ಕೆಲಸವಾಗಲಿ, ನಮ್ಮ ಸಾಮಥ್ರ್ಯದ ಮೇಲೆ ನಂಬಿಕೆಯಿಟ್ಟು ಮಾಡಿದಾಗ ಯಶಸ್ಸು ನಮ್ಮದೆ ಎಂದು ಕಲ್ಲಡ್ಕದ ಸರ್ವಜ್ಞ ಇನ್ಫೋಟೆಕ್ ಪ್ರಿ, ಲಿಮಿಟೆಡ್‍ನ ಸಿ.ಇ.ಒ. ಶ್ರೀನಿಧಿ ಭಟ್ ಹೇಳಿದರು. ಅವರು ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ವಿಭಾಗ, ಐಕ್ಯೂಎಸಿ ಹಾಗೂ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್, ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಜೀವನ ಕೌಶಲ್ಯಗಳು’ ಎಂಬ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಶಿಕ್ಷಣ ಎಂಬುದು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ ಇತರ ಚಟುವಟಿಕೆಗಳನ್ನು ಹೊಂದಿಸಿಕೊಂಡು ಹೋಗುವ ರೀತಿಯಲ್ಲಿ ಇರಬೇಕು. ಕಲಿತ ಮೇಲೆ ಏನಾದರೂ ಸಾಧನೆ ಮಾಡಬೇಕು. ಕಲಿಕೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ನಮ್ಮ ನಿರ್ಧಾರಗಳ ಮೇಲೆ ನಮ್ಮ ಜೀವನ ನಿಂತಿದೆ. ಸರ್ಟಿಫಿಕೇಟ್ ಕೋರ್ಸ್‍ಗಳೂ ಒಂದು ಪತ್ರಕ್ಕೆ ಮಾತ್ರ ಸೀಮಿತವಾಗದೆ ಬದುಕಿಗೆ ಅದು ಸಹಕಾರಿಯಾಗಬೇಕು. ಆತ್ಮವಿಶ್ವಾಸ, ಸೃಜನಶೀಲತೆ, ಆಸಕ್ತಿ ಇವೆಲ್ಲ ಜೀವನದ ಅಡಿಪಾಯಗಳು ಎಂದು ಹೇಳಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಐಕ್ಯೂಎಸಿ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ. ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ರವಿಕಲಾ ಸ್ವಾಗತಿಸಿ, ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮಾನಸ ಪ್ರಾರ್ಥಿಸಿದರು. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‍ನ ಸಂಸ್ಥಾಪಕ ಡಾ. ಶ್ರೀಶ ಭಟ್ ವಂದಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು