Thursday, January 23, 2025
ಹೆಚ್ಚಿನ ಸುದ್ದಿ

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಂಗಡಿಪೇಟೆ ಎಂಬಲ್ಲಿ ಆಟೋ ರಿಕ್ಷಾ ಮತ್ತು ಟಂಟೇನರ್ ನಡುವೆ ನಡೆದ ಭೀಕರ ಅಪಘಾತ; ಸ್ಥಳದಲ್ಲೇ 7 ಮಂದಿ ಸಾವು, 15 ಮಂದಿಗೆ ಗಂಭೀರ ಗಾಯ-ಕಹಳೆ ನ್ಯೂಸ್

ಹೈದ್ರಾಬಾದ್ : ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಂಗಡಿಪೇಟೆ ಎಂಬಲ್ಲಿ ಆಟೋ ರಿಕ್ಷಾ ಮತ್ತು ಟಂಟೇನರ್ ನಡುವೆ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಯಲ್ಲಿ ಮೃತಪಟ್ಟವರು ಆಟೋ ಚಾಲಕ ಮಲ್ಲೇಶ್, ಪೆದ್ದಮ್ಮ, ನೋಮಲ ಸೈದಮ್ಮ ಕೊಟ್ಟಂ, ಇದ್ದಮ್ಮ, ಮಲ್ಲಮ್ಮ ಮತ್ತು ಅಚಿಜನಮ್ಮ ಎಂದು ಗುರುತಿಸಲಾಗಿದೆ. ಹಾಗೆಯೇ ಗಂಭೀರವಾಗಿ ಗಾಯಗೊಂಡಿರುವ 13 ಮಂದಿಯನ್ನು ಸ್ಥಳೀಯ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಈ ಘಟನೆಯಲ್ಲಿ ಮೃತಪಟ್ಟವರು ಕೂಲಿ ಕಾರ್ಮಿಕರಾಗಿದ್ದು, ಇವರೆಲ್ಲರೂ ಕೆಲಸ ಮುಗಿಸಿ ಒಂದೇ ಆಟೋದಲ್ಲಿ ಸುಮಾರು 20 ಮಂದಿ ಮನೆಗೆ ಪ್ರಯಾಣ ಮಾಡುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಕಂಟೈನರ್ ಲಾರಿ ಆಟೋಗೆ ಢಿಕ್ಕಿ ಹೊಡಿದಿದೆ. ಈ ಅಪಘಾತ ನಡೆಯುತ್ತಿದ್ದಂತೆಯೇ 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದಾರೆ. ಈ ಘಟನೆಯ ಕುರಿತು ನಲ್ಗೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.