Monday, November 25, 2024
ಹೆಚ್ಚಿನ ಸುದ್ದಿ

ಭಗವದ್ಗೀತೆಯ 18 ಅಧ್ಯಾಯಗಳ ಕಂಠಪಾಠ ಮಾಡಿ ಸಾಧಿಸಿದ ಶ್ರೀರಾಮ ವಿದ್ಯಾಕೇಂದ್ರದ 7ನೇ ತರಗತಿ ವಿದ್ಯಾರ್ಥಿನಿ ವಾಸವಿಗೆ ಸನ್ಮಾನ – ಕಹಳೆ ನ್ಯೂಸ್

ಕಲ್ಲಡ್ಕ : ಈಗಿನ ಕಾಲದಲ್ಲಿ ಎಷ್ಟೋ ಜನರು ಭಗವದ್ಗೀತೆಯ ಪುಸ್ತಕ ನೋಡದಿರಬಹುದು, ನೋಡಿದರೂ ಓದದೇ ಒಂದು ಶ್ಲೋಕವೂ ಗೊತ್ತಿಲ್ಲದಿರಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಇಲ್ಲಿನ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ವಾಸವಿ ಭಗವದ್ಗೀತೆಯ 18 ಅಧ್ಯಾಯಗಳನ್ನು ಕಂಠಪಾಠ ಮಾಡಿ ಸಾಧನೆ ಮಾಡಿರುತ್ತಾಳೆ. ದಿನನಿತ್ಯ ಈ ಭಗವದ್ಗೀತೆಯ ಅಧ್ಯಯನದಿಂದ ಪೂರ್ತಿ ಗೀತೆಯನ್ನು ಕಂಠಪಾಠ ಮಾಡಲು ಸಾಧ್ಯವಾಯಿತು. ಈ ಸಾಧನೆ ಮಾಡಲು ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪೋಷಕರ ಸಹಕಾರದಿಂದಲೇ ಸಾಧ್ಯವಾಯಿತು ಎಂದು ತಿಳಿಸಿರುತ್ತಾಳೆ. ಇವರಿಗೆ ಕಲ್ಲಡ್ಕ ಶ್ರೀರಾಮ ಮಂದಿರದ ಸಾರ್ವಜನಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಒಡಿಯೂ ಶ್ರೀ ಸಾಧ್ವಿ ಮಾತಾನಂದಮಯಿಯವರು ಸನ್ಮಾನಿಸಿದರು. ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಇದರ ಅಧ್ಯಕ್ಷರು, ಆಡಳಿತ ಮಂಡಳಿ ಇವರು ಅಭಿನಂದನೆ ಸಲ್ಲಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು