Thursday, January 23, 2025
ಹೆಚ್ಚಿನ ಸುದ್ದಿ

ಲವ್ ಮಾಡುತ್ತಿದ್ದಾಕೆಗೆ ಮದುವೆ ಆಗುತ್ತಿರುವ ನೋವಲ್ಲಿ ಪ್ರಿಯಕರ ಆತ್ಮಹತ್ಯೆಗೆ ಯತ್ನ; ಪ್ರೇಯಸಿಯ ಮನೆಯಲ್ಲೇ ತಾಳಿ ಕಟ್ಟಿಸಿದ ಆತನ ಗೆಳೆಯರು -ಕಹಳೆ ನ್ಯೂಸ್

ಈ ಕಾಲದಲ್ಲಿ ಲವ್ ಮಾಡಿ ಬಿಟ್ಟೋಗೋದು ಕಾಮನ್ ಅದರಲ್ಲೂ ಹುಡ್ಗ ಹುಡ್ಗಿ ಜಗಳವಾಡಿ ಬೇರೆಯಾದರಂತೂ ತಿರುಗಿ ಮುಖ ನೋಡೋಕು ಇಷ್ಟಪಡಲ್ಲ ಅನ್ನೋ ಈ ಕಾಲದಲ್ಲಿ ಮಾಜಿ ಪ್ರಿಯಕರನೊಬ್ಬ ತನ್ನ ಹಳೇ ಡವ್ ಮದುವೆಯಾಗೋ ದಿನ ಹತ್ತಿರ ಬರ್ತಾ ಇರೋ ಹಾಗೇ ಸೀದಾ ಹೋಗಿ ಡವ್ ಮನೇಲೇ ತಾಳಿ ಕಟ್ಟಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಕೇಸ್ ದಾಖಲಾಗಿದೆ. ಇಂತಹದ್ದೊಂದು ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ಯುವತಿಯೊಬ್ಬಳ ಮನೆಯಲ್ಲಿ ನಡೆದಿದೆ. ಜನವರಿ 25ಕ್ಕೆ ಸುಜಿತ್ ಕೃಷ್ಣ ಎಂಬುವವರ ಜೊತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಯುವತಿಯ ಮದುವೆ ನಿಶ್ಚಯವಾಗಿತ್ತು. ಹಾಗೂ ಮದುವೆಗೆ ಕುಟುಂಬದವರು ಎಲ್ಲಾ ತಯಾರಿಮಾಡಿಕೊಂಡಿದ್ದರು. ಮದುವೆ ನಿಶ್ಚಯವಾಗಿರೋ ಹುಡುಗಿಯನ್ನು ತಾನು ಪ್ರೀತಿಸುತ್ತಿರೋದಾಗಿ ಸತೀಶ್ ಹೇಳಿಕೊಂಡಿದ್ದ. ಅಲ್ಲದೆ ಆಕೆ ಬೇರೆ ಮದುವೆ ಆಗುತ್ತಿರುವುದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ವಿಷಯ ತಿಳಿದ ಆತನ ಸ್ನೇಹಿತರು, ಸತೀಶ್‍ನನ್ನು ಯುವತಿ ಮನೆಗೆ ಕರೆದೊಯ್ದು ಅಲ್ಲೇ ಯುವತಿಯೊಂದಿಗೆ ಮದುವೆ ಮಾಡಿದ್ದಾರೆ. ತಮ್ಮ ಮಗಳಿಗೆ ಇಷ್ಟವಿಲ್ಲದಿದ್ದರೂ ತಮ್ಮನ್ನು ಬೆದರಿಸಿ ಬಲವಂತವಾಗಿ ಮನೆಯೊಳಗೇ ಅರಿಶಿಣಕೊಂಬು ಕಟ್ಟಿ ಮದುವೆ ಮಾಡಿದ್ದಾರೆ. ಹೀಗಾಗಿ ತಮ್ಮ ಮಗಳ ಪ್ರಾಣಕ್ಕೆ ಬೆದರಿಕೆ ಇದ್ದು ಆಕೆಯನ್ನು ರಕ್ಷಿಸಿ ಎಂದು ಯುವತಿಯ ತಾಯಿಯಿಂದ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಒಟ್ಟಿನಲ್ಲಿ ಲವ್ ಮಾಡಿರೋ ಹುಡುಗಿ ಬೇರೆ ಮದುವೆ ಆಗುತ್ತಿರೋದಕ್ಕೆ ಆತ್ಮಹತ್ಯೆಗೆ ಪ್ರಯತ್ನ ಪಟ್ಟ ಹುಡುಗನ ಗೆಳೆಯರು ಮುಂದೆ ನಿಂತು ಮದುವೆ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿರೋದು ಸುಳ್ಳಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು