Friday, September 20, 2024
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನ ಉಪನ್ಯಾಸ ಮಾಲಿಕೆ ಸಂಪನ್ನ – ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗವು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಜನವರಿ 18 ರಿಂದ 22 ರವರೆಗೆ ಸಂಜೆ ಘಂಟೆ 3 ರಿಂದ 4 ರವರೆಗೆ ಹಮ್ಮಿಕೊಂಡ ಸರಣಿ ಉಪನ್ಯಾಸ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ ವಿ ರಾವ್ ಇವರಿಂದ ಸಾಂಕೇತಿಕವಾಗಿ ಉದ್ಘಾಟನೆಗೊಂಡ ಉಪನ್ಯಾಸ ಸರಣಿಯು ಹಿರಿಯ ಲೇಖಕ ಸುಧೀಂಧ್ರ ಹಾಲ್ದೊಡ್ಡೇರಿಯವರ ‘ಮಳೆ ಹಿಂದಿನ ವಿಜ್ಞಾನ: ಮೇಘ ಮಿತ್ರರೊದ್ದಂ ನರಸಿಂಹ’, ಹಿರಿಯ ವಿಜ್ಞಾನ ಸಂವಹನಕಾರ ಕೊಳ್ಳೇಗಾಲ ಶರ್ಮ ಇವರ ‘ಹೌ ಟು ಬಿ ಇನ್ವೆಂಟರ್?’, ಉಜಿರೆಯ ಎಸ್‍ಡಿಎಂ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೋ.ಟಿ.ಎನ್ ಕೇಶವ ಇವರ ‘ಇರುವುದೆಲ್ಲವ ಬಿಟ್ಟು – ದಿ ಸ್ಟೋರಿ ಆಫ್ ವ್ಯಾಕ್ಯುಮ್’, ಕಾಂಞಗಾಡಿನ ನೆಹರೂ ಕಾಲೇಜಿನ ಭೌತಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥ ಪ್ರೋ.ಕೆ.ಎಂ.ಉದಯನಂದನ್ ಇವರ ‘ವೈ ದ ಸ್ಕೈ ಈಸ್ ಬ್ಲೂ ಇನ್ ಕಲರ್?’, ವೆಲ್ಲೋರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ರಮೇಶ್ ಎಂ. ತಾಮನ್‍ಕರ್ ಇವರ ‘ಲೊ ಡೈಮೆನ್ಶನಲ್ ಮೆಟೀರಿಯಲ್ಸ್: ಪ್ಲೇ ಗ್ರೌಂಡ್ ಆಫ್ ಫಿಸಿಕ್ಸ್’ ಎಂಬ ಉಪನ್ಯಾಸದೊಂದಿಗೆ ಮುಕ್ತಾಯಗೊಂಡಿತು. ವಿವಿಧ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಜನ ಸಾಮಾನ್ಯರು ಸೇರಿದಂತೆ ವಿಜ್ಞಾನಾಸಕ್ತರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ಜಾಹೀರಾತು