Recent Posts

Monday, January 20, 2025
ಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಇದರ ಅಶ್ರಯದಲ್ಲಿ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ -ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಇದರ ಅಶ್ರಯದಲ್ಲಿ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ ಮಾಚಾರು ಶಶಿಧರ ಭಟ್ ಅವರ ವಠಾರದಲ್ಲಿ ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ರಬ್ಬರ್ ಮಂಡಳಿ ಪ್ರಾದೇಶಿಕ ಕಛೇರಿಯ ಸಹಾಯಕ ಅಯುಕ್ತರಾದ ಶ್ರೀ ಬಾಲಕೃಷ್ಣ ಅವರು 8 ದಿನ ತರಬೇತಿ ಪಡೆದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ರಬ್ಬರ್ ಮರಗಳ ಕಾಳಜಿಯ ಕುರಿತು ಮತ್ತು ತರಬೇತಿ ಅವಶ್ಯಕತೆ ಕುರಿತು ಮಾತಾಡಿದರು. ಹಾಗೂ ರಬ್ಬರ್ ಮಂಡಳಿಯಲ್ಲಿ ಕಾರ್ಮಿಕರಿಗಿರುವ ಕೆಲವು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಪ್ರಭಾರ ರಬ್ಬರ್ ಬೆಳೆ ಅಭಿವೃದ್ದಿ ಅಧಿಕಾರಿ ಜೋಯ್ ಜೋನ್ ಅವರು ಕಾರ್ಮಿಕರಿಗೆ ಕೆಲವು ಮಾಹಿತಿ ನೀಡಿ ಮಂಡಳಿಯಿಂದ ತರಬೇತಿ ಪಡೆದ ಕಾರ್ಮಿಕರಿಗೆ ಕೆಲಸದಲ್ಲಿ ಶಿಸ್ತು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಹಾಗೂ ಬಿ.ಎಂ.ಎಸ್ ತಾಲೂಕು ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಕಾನರ್ಪ ರವರು ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಜೀವನ ಭದ್ರತೆಗೆ ಬೇಕಾಗುವ ಸರಕಾರದ ಕೆಲವು ಯೋಜನೆಗಳ ಮಾಹಿತಿ ನೀಡಿ ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಮಿಕರು ದುಶ್ಚಟ ಮುಕ್ತರಾಗಿ ಜೀವನವನ್ನು ಕೌಟುಂಬಿಕ ಮತ್ತು ಸಾಮಾಜಿಕವಾಗಿ ಉತ್ತಮ ರೀತಿಯಲ್ಲಿ ಜೀವಿಸಿ ಅದರ್ಶವಾಗಿ ಬಾಳುವಂತೆ ಕರೆ ನೀಡಿದರು. ಹಾಗೆ ಈ ಸಂದರ್ಭದಲ್ಲಿ ತರಬೇತಿ ನೀಡಿದ ರಬ್ಬರ್ ಮಂಡಳಿಯ ನಿವೃತ್ತ ಅಧಿಕಾರಿ ರಾಘವನ್ ಅವರಿಗೆ ಶಿಬಿರಾರ್ಥಿಗಳಿಂದ ಸನ್ಮಾನವನ್ನು ನೇರವೇರಿಸಲಾಯಿತು. ನಂತರ ತರಬೇತಿ ಪಡೆದ ಕಾರ್ಮಿಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಹಾಗೆಯೇ ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಶಶಿಧರ್ ಭಟ್ ಮಾಚಾರು ಅವರು ವಹಿಸಿದ್ದು, ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಜಿಲ್ಲಾದ್ಯಕ್ಷರಾದ ಸುರೇಶ್ ದಯಾನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮತ್ತು ಭುವನೇಶ್ವರ ಅವರು ಕಾರ್ಯಕ್ರಮ ನಿರೂಪಿಸಿದರು , ಹಾಗೂ ಪಧಾದಿಕಾರಿಗಳಾದ ನಾಗರಾಜು ಮಾಚಾರು ಸೆಂಥಿಲ್ ಕುಮಾರ್ ,ರಾಜಾ ಮಾಚಾರು ,ಅಜಿತ್ ಕುಮಾರ್ ಕಿನ್ಯಾಜೆ, ರಘುಪತಿ ತೋಡಿಕಾನ ,ಚಂದ್ರ ಮಂಜೊಟ್ಟಿ, ವಿನಯ ಚಂದ್ರ ಉಪಸ್ಥಿತರಿದ್ದರು.