Recent Posts

Sunday, January 19, 2025
ಬೆಂಗಳೂರು

“ಫಸ್ಟ್ ಡೇ ಫಸ್ಟ್ ಶೋ ಯಾವಾಗಲೂ ನಾನು ಅಣ್ಣನ ಜೊತೆಗೆ ನೋಡುತ್ತಿದ್ದೆ ; ಪೊಗರು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಚಿರಂಜೀವಿ ಸರ್ಜಾರನ್ನು ನೆನೆದು ಕಣ್ಣೀರಿಟ್ಟ ಧ್ರುವ ಸರ್ಜಾ-ಕಹಳೆ ನ್ಯೂಸ್

ಬೆಂಗಳೂರು : ಪೊಗರು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಲ್‍ವುಡ್ ನಟ ದಿವಂಗತ ಚಿರಂಜೀವಿ ಸರ್ಜಾರನ್ನು ನೆನೆದು ಕಣ್ಣೀರಿಟ್ಟ ಧ್ರುವ ಸರ್ಜಾ, ಸಿನಿಮಾದ ಎಡಿಟಿಂಗ್ ವೇಳೆ ಅಣ್ಣ ಸಿನಿಮಾ ನೋಡಿದ್ದು, ಯಾವ ರೀತಿಯಾಗಿ ಮಾಡಬೇಕೆಂದು ಸಲಹೆ ನೀಡಿದ್ದ ಎಂದು ಹೇಳಿ ಕಳೆದು ಹೋದ ನೆನಪುಗಳನ್ನು ಮೆಲುಕುಹಾಕುತ್ತ ಧ್ರುವ ಸರ್ಜಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು “ಫಸ್ಟ್ ಡೇ ಫಸ್ಟ್ ಶೋ ಯಾವಾಗಲೂ ನಾನು ಅಣ್ಣನ ಜೊತೆಗೆ ನೋಡುತ್ತಿದ್ದೆ, ಆದರೆ ಈಗ ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಹೇಳಿ ಕಣ್ಣೀರಿಟ್ಟಿದ್ದು, ಫೆಬ್ರುವರಿ 19ರಂದು ಪೊಗರು ಸಿನಿಮಾ ತೆರೆ ಕಾಣಲಿದ್ದು, ಈ ಚಿತ್ರದಲ್ಲಿ ಧ್ರುವಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾವನ್ನು ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು