Recent Posts

Sunday, January 19, 2025
ಬೆಂಗಳೂರು

ಇದೇ ಜನವರಿ 31 ರಂದು ದುಬೈಯಲ್ಲಿರುವ ಬುರ್ಜಿ ಖಲೀಫದಲ್ಲಿ ರಾರಾಜಿಸಲಿದೆ ಕಿಚ್ಚ ಸುದೀಪ್ ನ ಕಟೌಟ್-ಕಹಳೆ ನ್ಯೂಸ್

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಫ್ಯಾಂಟಮ್ ಚಿತ್ರದ ಶೀರ್ಷಿಕೆ ವಿಕ್ರಾಂತ್ ರೋಣ ಎಂದು ಬದಲಾಗಿದ್ದು, ಇದೀಗ ಜನವರಿ 31 ರಂದು ದುಬೈಯಲ್ಲಿರುವ ಬುರ್ಜಿ ಖಲೀಫದಲ್ಲಿ ಕಿಚ್ಚನ ಕಟೌಟ್ ರಾರಾಜಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಿನೆಮಾರಂಗದ ಇತಿಹಾಸದಲ್ಲಿ ಇದು ಹೊಸ ಪ್ರಯತ್ನವಾಗಿದ್ದು, ನಟ ಕಿಚ್ಚ ಸುದೀಪ್ ಅವರ 25 ವರ್ಷಗಳ ಸಿನಿಮಾ ಜೀವನಕ್ಕೆ ವಿಶೇಷ ಉಡುಗೊರೆಯಾಗಲಿದೆ. ಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರು ಟ್ವೀಟ್ ಮಾಡಿದ್ದಾರೆ. ಇದೇ 31ರಂದು ದುಬೈಯಲ್ಲಿರುವ ಅತಿ ಎತ್ತರದ ಬುರ್ಜಿ ಖಲೀಫದಲ್ಲಿ ಈ ಸಿನಿಮಾದ ಶೀರ್ಷಿಕೆ ಲೋಗೋ ಹಾಗೂ 180 ಸೆಕೆಂಡ್‍ಗಳ ವರ್ಚುವಲ್ ಸುದೀಪ ಅವರ ಕಟೌಟ್ ರಾರಾಜಿಸಲಿದೆ ಎಂದು ತಿಳಿದು ಬಂದಿದೆ.