Monday, January 20, 2025
ಸುದ್ದಿ

ಫೆಬ್ರವರಿ 19 ರಂದು ತೆರೆಗೆ ಬರಲಿದೆ ನವೀನ್ ಶೆಟ್ಟಿ ನಿರ್ದೇಶನದ ತುಳು ಸಿನೆಮಾ ಗಮ್ಜಾಲ್-ಕಹಳೆ ನ್ಯೂಸ್

ಮಂಗಳೂರು : ಫೆಬ್ರವರಿ 19 ರಂದು ಬಹುನಿರೀಕ್ಷಿತ ತುಳು ಸಿನಿಮಾ ಗಮ್ಜಾಲ್ ತೆರೆಗೆ ಬರಲಿದೆ. ಈ ಸಿನೆಮಾವನ್ನು ಆರ್‍ಎಸ್ ಫಿಲ್ಮ್ಸ್, ಶೂಲಿನ್ ಫಿಲ್ಮ್ಸ್ ಹಾಗೂ ಮುಗ್ರೊಡಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಿತ್ರವನ್ನು ಸುಮನ್ ಸುವರ್ಣ ಹಾಗೂ ನವೀನ್ ಶೆಟ್ಟಿ ನಿರ್ದೇಶಿಸಿದ್ದು, ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಖ್ಯಾತ ನಟ-ನಿರ್ದೇಶಕ ರೂಪೇಶ್ ಶೆಟ್ಟಿ ಬರೆದಿದ್ದಾರೆ. ಹಾಗೇ ಜೋಯಲ್ ರೆಬೆಲ್ಲೊ ಮತ್ತು ಡ್ಯಾರೆಲ್ ಮಸ್ಕರೇನ್ಹಾಸ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದಲ್ಲಿ ಜನಪ್ರಿಯ ಕೋಸ್ಟಲ್ ವುಡ್ ನಟರಾದ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಕರಿಷ್ಮಾ ಮತ್ತು ಇತರ ನಟರು ನಟಿಸಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಗಮ್ಜಾಲ್ ಚಿತ್ರವನ್ನು ಚಿತ್ರೀಕರಿಸಲಾಗಿದೆ ಹಾಗೂ 2 ಚಲನಚಿತ್ರಗಳ ಪ್ಯಾಕೇಜ್ ಎಂಬ ಟ್ಯಾಗ್ ಲೈನ್ ಹೊಂದಿದ್ದು, ಇದು ಸಿನಿ ಪ್ರಿಯರಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಚಲನಚಿತ್ರವು ಸಂಪೂರ್ಣ ಮನರಂಜನೆ ಹೊಂದಿದೆ ಎನ್ನಲಾಗಿದೆ. ಇನ್ನು ಬೊಂದೆಲ್‍ನಲ್ಲಿರುವ ಪ್ರಸಿದ್ಧ ದೈಜಿವಲ್ರ್ಡ್ ಆಡಿಯೋ ವಿಷುವಲ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ‘ಗಮ್ಜಾಲ್’ನ ಡಬ್ಬಿಂಗ್ ನಡೆಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು