ಇಡುಕ್ಕಿ : ಕೇರಳದ ಇಡುಕ್ಕಿ ಅರಣ್ಯಾಧಿಕಾರಿಗಳು ಚಿರತೆಯನ್ನು ಹತ್ಯೆ ಮಾಡಿ ಅದರ ಮಾಂಸವನ್ನು ತಿಂದು ತೇಗಿದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಂಧಿತರು ಈ ಹಿಂದೆ ಕೂಡ ಇಂಥದ್ದೇ ಕೃತ್ಯವೆಸಗಿದ್ದು, ಚಿರತೆಯನ್ನು ಸಾಮಾನ್ಯವಾಗಿ ಅದರ ಉಗುರು ಮತ್ತು ಚರ್ಮಕ್ಕಾಗಿ ಬೇಟೆ ಆಡುವುದು ಸಹಜ. ಆದರೆ ಈ ಐವರು ಆರೋಪಿಗಳು ಅದರ ಮಾಂಸವನ್ನೂ ತಿಂದಿದ್ದಾರೆ. ಈ ಆರೋಪಿಗಳ ವಿರುದ್ಧ ವನ್ಯಜೀವಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಬಂಧಿತರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ