Sunday, November 24, 2024
ಹೆಚ್ಚಿನ ಸುದ್ದಿ

ಚಿರತೆಯನ್ನು ಹಿಡಿಯಲು ಬೋನುಗಳನ್ನು ಅಳವಡಿಸಿದ್ದರೂ ಕೂಡ, ಬೋನಿನಲ್ಲಿದ್ದ ಎರಡು ಕುರಿಗಳನ್ನು ತಿಂದು ಕಾಡಿಗೆ ತೆರಳಿದ ಚಿರತೆ-ಕಹಳೆ ನ್ಯೂಸ್

ಕೊಳ್ಳೇಗಾಲ : ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಎರಡು ಬೋನುಗಳನ್ನು ಅಳವಡಿಸಿದ್ದರೂ ಕೂಡ, ಚಿರತೆ ಬೋನಿನಲ್ಲಿದ್ದ ಎರಡು ಕುರಿಗಳನ್ನು ತಿಂದು ಹಾಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಳ್ಳೇಗಾಲ ತಾಲೂಕಿನ ಯಡಕುರಿಯ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಈ ಗ್ರಾಮಸ್ಥರು ಚಿರತೆ ಭಯದಿಂದ ಕಂಗೆಟ್ಟಿದ್ದಾರೆ. ಹಾಗೂ ಅರಣ್ಯ ಇಲಾಖೆಗೆ ಚಿರತೆಯನ್ನು ಹಿಡಿಯುವಂತೆ ಮನವಿ ಮಾಡಿದ್ದರು. ಜನರ ಮನವಿಯ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಎರಡು ಬೋನುಗಳನ್ನು ಯಡ ಕುರಿಯ ಸೇತುವೆ ಬಳಿ ಮತ್ತು ಸತ್ತೇ ಗಾಲ ನಾಲೆಯ ಬಳಿ ಬೋನ್ ಅಳವಡಿಸಿದ್ದರು. ಆದರೆ ಚಿರತೆಯನ್ನು ಸೆಳೆಯುವ ಉದ್ದೇಶದಿಂದ ಇರಿಸಲಾಗಿದ್ದ ಕುರಿಗಳನ್ನು ತಿಂದು ಚಿರತೆ ಕಾಡಿಗೆ ತೆರಳಿದೆ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು