ಕೊರಟಗೆರೆಯಲ್ಲಿ ನಡೆದ ಸುಭಾಷ್ ಚಂದ್ರಬೋಸ್ 125 ಜನ್ಮ ದಿನಾಚರಣೆಯ ಅಂಗವಾಗಿ ಜೈ ಹಿಂದ್ ರನ್– ಕಹಳೆ ನ್ಯೂಸ್
ಕೊರಟಗೆರೆ : ಕೊರಟಗೆರೆಯಲ್ಲಿ ಸುಭಾಷ್ ಚಂದ್ರಬೋಸ್ 125 ಜನ್ಮದಿನದ ಅಂಗವಾಗಿ ಯುವ ಬ್ರಿಗೇಡ್ ವತಿಯಿಂದ ಜೈ ಹಿಂದ್ ರನ್ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷನಕಾರನಾಗಿ ಮಾತನಾಡಿದ ಪ್ರಚಾರಕ ನರಸಿಂಹಲು ಬಾಬು ಸುಭಾಷ್ ಚಂದ್ರಬೋಸರ ದೇಶ ಪ್ರೇಮವನ್ನು ಕೊಂಡಾಡುತ್ತ ಹಿರಿಯರು ಸ್ವಾತಂತ್ರ ವನ್ನು ನೀಡಿರುವುದು ಅಹಿಂಸಾತ್ಮಕ ಕೆಲಸಗಳಿಗಲ್ಲ, ನಮ್ಮ ಶಕ್ತಿಯಾಗಿರುವ ಭಾರತದ ಸೈನ್ಯ ಬ್ರಿಟೀಷರ ಮಾತನ್ನು ಕೇಳುತ್ತಿಲ್ಲ ಎನ್ನುವ ಸಂದರ್ಭ ಬ್ರಿಟೀಷರು ಸ್ವಾತಂತ್ರ್ಯ ನೀಡುತ್ತಿದ್ದೇವೆ ಎಂದು ಭಾರತದಿಂದ ಕಾಲು ಕಿತ್ತರು. ಭಾರತೀಯ ಸೈನಿಕರಲ್ಲಿ ದೇಶಪ್ರೇಮದ ಕಿಚ್ಚನ್ನು ಅಚ್ಚಿದ ಸುಭಾಷ್ ಚಂದ್ರಬೋಸ್ ಹಾಗೂ ಹಲವು ಕ್ರಾಂತಿಕಾರಿಗಳು ಜೊತೆಗೂಡಿದ್ದರ ಫಲವೇ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳುತ್ತಾ, ನಾವು ಇಂದು ಪಠ್ಯ ಪುಸ್ತಕದಲ್ಲಿ ಓದುತ್ತಿರುವ ಇತಿಹಾಸವನ್ನೇ ಸತ್ಯ ಎಂದು ನಂಬುತ್ತಿದ್ದೇವೆ. ವಾಸ್ತವದಲ್ಲಿ ಇದರಲ್ಲಿರುವಂತಹ ಎಲ್ಲಾ ವಿಚಾರಗಳೂ ಸತ್ಯವಲ್ಲ ನಿಜವಾದ ಸ್ವತಂತ್ರ ಹೋರಾಟ ಮತ್ತು ಹೋರಾಟದಲ್ಲಿ ಹೋರಾಡಿ ಪ್ರಾಣತ್ಯಾಗ ಮಾಡಿದವರ ಬಗ್ಗೆ ಸರಿಯಾಗಿ ನಾವು ತಿಳಿಯಬೇಕು ಎಂದರು. ಪಟ್ಟಣದ ಎಸ್‌ಎಸ್‌ಆರ್ ವೃತ್ತದಿಂದ ಸುವರ್ಣಮುಖಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವರೆಗೆ ಜೈ ಹಿಂದ್ ರನ್ ಮ್ಯಾರಥಾನ್ ಕಾರ್ಯಕ್ರಮದ ಮೂಲಕ ಯುವ ಬ್ರಿಗೆಡ್ ಸದಸ್ಯರು ಓಟವನ್ನು ನಡೆಸಿದರು. ಕಾರ್ಯಕ್ರಮವನ್ನು ವಾಸವಿ ಯುವಜನ ಸಂಘದ ಅಧ್ಯಕ್ಷ ಎಂ.ಜಿ ಬದ್ರಿಪ್ರಸಾದ್ ಉದ್ಘಾಟಿಸಿ, ಮಾರಥಾನ್ ಓಟದಲ್ಲಿ ಪ.ಪಂ ಸದಸ್ಯ ಪ್ರದೀಪ್ ಕುಮಾರ್, ಪುರುಷೋತ್ತಮ್, ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ರಂಜಿತ್, ಜಿಲ್ಲಾ ಸಹಸಂಚಾಲಕ ಅಭಿಷೇಕ್, ಹರ್ಷ, ಕೊರಟಗೆರೆ ತಾಲೂಕು ಸಂಚಾಲಕ ರಘುರಾಮ್, ಮುಖಂಡರಾದ ಡಾ.ಹರೀಶ್, ಲಕ್ಷ್ಮೀ ಪ್ರಸಾದ್, ದಿನೇಶ್, ರಾಘವೇಂದ್ರ, ಜಗನಾಥ್, ಶಿವಕುಮಾರ್, ಚಕ್ರಧರ್, ಕರಿಣ್, ಮೋಹನ್, ಲಿಖಿತ್, ಮಿಧುನ್, ದರ್ಶನ್, ಮನೋಜ್, ಬಾಲಾಜಿ ಸೇರಿದಂತೆ ಇತರರು ಭಾಗಿಯಾಗಿದ್ದರು.