Saturday, November 23, 2024
ಸುಳ್ಯ

ಜನವರಿ 26 ರಂದು ಮುಸ್ಸಂಜೆಯ ಹೊಂಗಿರಣ ಕೃತಿ ಬಿಡುಗಡೆ ; ಗಾಂಧೀಜಿಯವರ ಮೌಲ್ಯಗಳ ಪ್ರಸ್ತುತತೆ ಸಂವಾದ ಕಾರ್ಯಕ್ರಮ-ಕಹಳೆ ನ್ಯೂಸ್

ಸುಳ್ಯ : ರೂರಲ್ ಮಿರರ್ ಪ್ರಕಾಶನದ ವತಿಯಿಂದ ಕೊರೋನಾ ಕೃಪೆಯ ವರಗಳತ್ತ ಇಣುಕು ನೋಟದ ಮುಸ್ಸಂಜೆಯ ಹೊಂಗಿರಣ ಕೃತಿ ಬಿಡುಗಡೆ ಹಾಗೂ ಗಾಂಧೀಜಿಯವರ ಮೌಲ್ಯಗಳ ಪ್ರಸ್ತುತತೆಯ ಬಗ್ಗೆ ಸಂವಾದ ಕಾರ್ಯಕ್ರಮ ಜನವರಿ 26 ರಂದು ಗುತ್ತಿಗಾರು ಗ್ರಾಮದ ಮೊಗ್ರ ಶಾಲೆಯ ವಠಾರದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತು ಹಿರಿಯ ಬರಹಗಾರ, ಪತ್ರಕರ್ತ ನಾ.ಕಾರಂತ ಪೆರಾಜೆ ಅವರು ಬರೆದಿರುವ ಮುಸ್ಸಂಜೆಯ ಹೊಂಗಿರಣ ಕೃತಿಯನ್ನು ಸಾಹಿತಿ, ಚಿಂತಕ ಅರವಿಂದ ಚೊಕ್ಕಾಡಿ ಬಿಡುಗಡೆಗೊಳಿಸುವರು. ಈ ಸಂದರ್ಭ ವಿಧಾನಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಬರಹಗಾರ ನಾ.ಕಾರಂತ ಪೆರಾಜೆ ಮೊದಲಾದವರು ಭಾಗವಹಿಸುವರು. ಪುಸ್ತಕ ಬಿಡುಗಡೆಯ ಬಳಿಕ ಗಾಂಧೀಜಿಯವರ ಮೌಲ್ಯಗಳ ಪ್ರಸ್ತುತತೆಯ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಾಹಿತಿ, ಚಿಂತಕ ಅರವಿಂದ ಚೊಕ್ಕಾಡಿ ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬೆಳಗ್ಗೆ 9.30 ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು