ನವದೆಹಲಿ: ಜ.೨೬ರ ಗಣರಾಜ್ಯೋತ್ಸವದಂದು ಟ್ರ‍್ಯಾಕ್ಟರ್ ರ‍್ಯಾಲಿ ನಡೆಸಲು ರೈತರು ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದಾರೆ. ರ‍್ಯಾಲಿಯ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೇಚ್ಚರಿಕ ಕ್ರಮ ಕೈಗೊಂಡ ರೈತ ಮುಖಂಡರುಗಳು ರ‍್ಯಾಲಿಯಲ್ಲಿ ಪಾಲ್ಗೋಳ್ಳವ ರೈತರಿಗೆ ಯಾವುದೇ ಆಯುಧಗಳನ್ನು ಒಯ್ಯಬಾರದು ಮತ್ತು ಮಧ್ಯಪಾನ ಮಾಡಬಾರದು ಎಂದು ಹಲವು ಸೂಚನೆಗಳನ್ನು ನೀಡಿದ್ದಾರೆ.
ಅಲ್ಲದೇ ಯಾವುದೇ ರೀತಿಯ ಪ್ರಚೋದನಾಕಾರಿ ಸಂದೇಶಗಳನ್ನು ಹೊತ್ತ ಬ್ಯಾನರ್ ಗಳಿಗೆ ಅನುಮತಿ ಇಲ್ಲ ಎಂದು ಸೂಚಿಸಿದ್ದಾರೆ. ಸಿಂಗು ಗಡಿಯಿಂದ ಪ್ರಾರಂಭವಾಗಿ ಸುಮಾರು 63 ಕಿ.ಮೀ.ಉದ್ದವಿರುವ 1ನೇ ಮಾರ್ಗವು,, ಸಂಜಯ್ ಗಾಂಧಿ ಸಾರಿಗೆ ನಗರ, ಬವಾನ, ಕುತಬ್‍ಗಢ, ಔಚಾಂಡಿ ಗಡಿ, ಮತ್ತು ಖರ‍್ಖೋಡಾ ಟೋಲ್ ಪ್ಲಾಜಾ ಮೂಲಕವಾಗಿ ರ‍್ಯಾಲಿ ಸಂಚರಿಸುತ್ತದೆ. ಅದರಂತೆ, ಸುಮಾರು 62ಕಿ.ಮೀ ಉದ್ದದ 2ನೇ ಮಾರ್ಗವು ನಾಗ್ಲೋಯ್, ನಜಾಫ್‍ಗಢ, ಝೊರೋಡಾ ಗಡಿ ಮತ್ತು ರೋಹ್ಟಕ್ ಬೈಪಾಸ್ ಮತ್ತು ಅಸೋಡಾ ಟೋಲ್ ಪ್ಲಾಜಾ ಮಾರ್ಗದ ಮೂಲಕ ಹಾದು ಹೋಗಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.