Monday, January 20, 2025
ಬಂಟ್ವಾಳ

ಅಜ್ಜಿಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣಪತ್ರ ಬಿಡುಗಡೆ, ಭಕ್ತಿ ಜೊತೆಗೆ ಸಂಸ್ಕಾರ ಅಗತ್ಯ: ಮಾಣಿಲಶ್ರೀ-ಕಹಳೆ ನ್ಯೂಸ್

ಬಂಟ್ವಾಳ: ವೇಣೂರು ಅಜಿಲ ಸೀಮೆ ಮಾಗಣೆಯ ಏಳು ಗ್ರಾಮದ ಭಕ್ತರು ಒಟ್ಟಾಗಿ ಭಕ್ತಿ ಮತ್ತು ಪ್ರೀತಿಯಿಂದ ಸಂಘಟಿತರಾಗಿ ಧಾರ್ಮಿಕತೆ ಜೊತೆಗೆ ಸಮಸ್ತ ಭಕ್ತರಿಗೆ ಸಂಸ್ಕಾರ ನೀಡಲು ಶ್ರಮಿಸಬೇಕು ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ಅಜ್ಜಿಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಾನುವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಆಮಂತ್ರಣಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಸಂಕುಚಿತ ಮನೋಭಾವ ತೊರೆದು ಆದಾಯ ಸದುಪಯೋಗಪಡಿಸಬೇಕು ಎಂದರು. ಅಳದಂಗಡಿ ಅರಮನೆ ಡಾ.ಪದ್ಮಪ್ರಸಾದ್ ಅಜಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮಿತಿ ಗೌರವಾಧ್ಯಕ್ಷ ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಧ್ವನಿಸುರುಳಿ ಬಿಡುಗಡೆಗೊಳಿಸಿ ಮಾತನಾಡಿ, 45 ದಿನ ನಿರಂತರ ಭಜನೆ , ಅತೀವ ಭಕ್ತಿ, ಶ್ರಮದಾನ ಮೂಲಕ ಕೃಷಿಕರ ತೊಡಗಿಸಿಕೊಳ್ಳುವಿಕೆ ಅಗತ್ಯವಿದೆ ಎಂದರು. ಪ್ರಮುಖರಾದ ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಉಪನ್ಯಾಸಕ ಪ್ರೊ.ಕೆ.ತುಕಾರಾಮ ಪೂಜಾರಿ, ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ ಬುಳೇರಿ, ಕೌಡೋಡಿ ಬೂಬ ಪೂಜಾರಿ, ಅಮ್ಮು ರೈ ಹರ್ಕಾಡಿ, ಸುಲೋಚನಾ ಜಿ.ಕೆ.ಭಟ್, ಭೋಜರಾಜ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಕುಂಡೊಳಿ, ವಸಂತ ಶೆಟ್ಟಿ ಅರ್ಕೆದೊಟ್ಟು, ದಿನಕರ ಪಕ್ಕಳ ಇದ್ದರು. ಸಮಿತಿ ಕಾರ್ಯದರ್ಶಿ ಗೋಪಾಲ ಅಂಚನ್ ಸ್ವಾಗತಿಸಿ, ಕಾರ್ಯದರ್ಶಿ ಯೋಗೀಶ ಕಲಸಡ್ಕ ವಂದಿಸಿದರು. ಕಲಾವಿದ ಎಚ್ಕೆ ನಯನಾಡು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು