Saturday, November 23, 2024
ಪುತ್ತೂರು

7ನೇ ವರ್ಷಕ್ಕೆ ಪಾದಾರ್ಪಣೆಗೈದ ಪ್ರಗತಿ ಸ್ಟಡಿ ಸೆಂಟರ್ “ಮಿಷನ್-100”-ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಧರ್ಮಸ್ಥಳ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜುಕೇಶನಲ್ ಫೌಂಡೇಶನ್ (ರಿ.) ಪುತ್ತೂರು. ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ 2020-21ನೇ ಸಾಲಿನ SSಐಅ, PUಅ “ಮಿಷನ್ 100” ಇದರ 7ನೇ ವರ್ಷಕ್ಕೆ ಪಾದಾರ್ಪಣೆಗೈದ ಹಿನ್ನಲೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ರವಿವಾರ ನಡೆಯಿತು. ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆಯಾದ ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತ ಸತೀಶ್ ಮಾತಾನಾಡಿ, ವ್ಯಕ್ತಿತ್ವ ರೂಪಿಸುವಲ್ಲಿ ವಿದ್ಯಾರ್ಥಿಗಳು ಸಫಲರಾಗಬೇಕು ನಿರಂತರ ಶ್ರಮ ಹಾಗೂ ಅವಕಾಶಗಳ ಸದುಪಯೋಗದಿಂದ ಗುರಿಯನ್ನು ಸಾಧಿಸಲು ಸಾಧ್ಯ, ಪ್ರತಿ ಅವಕಾಶವನ್ನು ಅಂತಿಮ ಅವಕಾಶ ಎಂಬಂತೆ ಭಾವಿಸಿ ಮುನ್ನಡೆಯಬೇಕು. ನಾವು ಏನನ್ನು ಕಲಿತ್ತಿದ್ದೇವೆ ಎಂದು ತಿಳಿಯಲು ಅಂಕಗಳು ಅತ್ಯವಶ್ಯಕ ಹಾಗಾಗೀ ಒಳ್ಳೆಯ ಅಂಕಗಳನ್ನ ಗಳಿಸಿ, ಉತ್ತಮ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

“ಮಿಷನ್ 100” ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಟ್ಟಿದೆ, ಪ್ರತಿ ವಿದ್ಯಾರ್ಥಿಗಳಲ್ಲೂ ಕಲೆ ಪ್ರತಿಭೆ ಇದ್ದೇ ಇರುತ್ತದೆ ಇದರ ಅನಾವರಣಕ್ಕೆ ಸೂಕ್ತ ವೇದಿಕೆಗಳು ಮುಖ್ಯ ಜೊತೆಗೆ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು ಹಾಗೆಯೇ ಜೀವನಕ್ಕೆ ನಾವೇ ಹಾಕಿಕೊಂಡ ಬೇಲಿಯಿಂದ ಹೊರ ಬಂದು ಸುತ್ತಲೂ ಇರುವ ಜಗತ್ತಿನ ಪರಿಚಯ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದು ಪ್ರಗತಿ ಮಿಷನ್ 100 ರ ಪ್ರಥಮ ಬ್ಯಾಚ್ ನ ಮೊದಲ ಹಾಗೂ ಹಳೆಯ ವಿದ್ಯಾರ್ಥಿನಿಯಾದ ಕೆ. ಮನೀಷ ಶೆಟ್ಟಿ ಹೇಳಿದರು. ಪ್ರಗತಿ ಸ್ಟಡಿ ಸೇಂಟರ್ ನ ಪ್ರಾಂಶುಪಾಲಕರಾದ ಶ್ರೀಮತಿ ಹೇಮಲತಾ ಗೋಕುಲ್ ನಾಥ್ ರವರು ಮಾತಾನಾಡಿ, “ಮಿಷನ್ 100” ನಡೆದು ಬಂದ ಹಾದಿಯ ಕುರಿತು ಪ್ರಸ್ತಾವಿಕ ಮಾತುಗಳನ್ನಾಡಿದರು. ನಾನು ಕಂಡಂತಹ ಕನಸಿನ ಗುರಿ ಮುಟ್ಟಲು ಕಠಿಣ ಶ್ರಮ ಪಡುತ್ತಿದ್ದು, ಭವಿಷ್ಯದ ಕನಸು ನನಸು ಮಾಡಲು ಪ್ರಗತಿ ಸ್ಟಡಿ ಸೆಂಟರ್ ನನಗೆ ಪ್ರೇರಣೆಯಾಗಿದೆ ಎಂದು ಪ್ರಸ್ತುತ ಮಿಷನ್ 100ರ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಮನ್ ಶರೀಫ್ ರವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. SSಐಅ ವಿದ್ಯಾರ್ಥಿನಿ ರಿಜ್ಮಾ ಮರಿಯಮ್ಮ ಮಾತಾನಾಡಿ ಕೊರೋನದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಲಿಕೆಗೆ ಗಮನಹರಿಸಲಾಗದೆ, ಸಾಮಾಜಿಕ ಜಾಲತಾಣದತ್ತ ಆಕರ್ಷಣೆಗೊಳ್ಳುವ ಸಮಯದಲ್ಲಿ ಪರೀಕ್ಷೆಯ ಬಗ್ಗೆ ಎಚ್ಚರಿಸಿ, ಪ್ರತಿನಿತ್ಯ ದೈನಂದಿನ ತರಗತಿ ನಡೆಸಿ ಶೈಕ್ಷಣಿಕ ಬೆಳವಣಿಗೆಗೆ ಸಹಕಾರ ನೀಡುತ್ತಿರುವ ಪ್ರಗತಿ ಸಂಸ್ಥಯ ಮಿಷನ್ 100 ಯೋಜನೆಗೆ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರೀಮತಿ ವಿಮಲಾ ಲಕ್ಷ್ಮಣರವರು ಕಾರ್ಯಕ್ರಮ ನಿರೂಪಿಸಿ, ಕನ್ನಡ ಉಪನ್ಯಾಸಕಿ ಪ್ರಮೀಳಾ ಎನ್.ಡಿ.ರವರು ಸ್ವಾಗತಿಸಿದ್ರು, ಅರ್ಥಶಾಸ್ತ್ರ ಉಪನ್ಯಾಸಕಿ ಕು. ದೀಪ್ತಿ ಧನ್ಯವಾದ ಸಮರ್ಪಿಸಿದರು. ಮಿಷನ್ 100ರ ವಿದ್ಯಾರ್ತಿಗಳು , ಪೋಷಕರು, ಹಾಗೂ ಉಪನ್ಯಾಸಕ ವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರತಿನಿತ್ಯದ ಹಾಗೂ ವಾರಾಂತ್ಯದ ಪ್ರತ್ಯೇಕ ಟ್ಯೂಷನ್ ಬ್ಯಾಚ್ಗಳ ವ್ಯವಸ್ಥೆಯಿದ್ದು, ಪ್ರತಿನಿತ್ಯ ಮಧ್ಯಾಹ್ನ 2:00ರಿಂದ 5:30ರವರೆಗೆ ಹಾಗೂ ವಾರಾಂತ್ಯದ ಬ್ಯಾಚ್ ಆದಿತ್ಯವಾರ ಬೆಳಗ್ಗೆ 9:30ರಿಂದ ಸಂಜೆ 3 ಗಂಟೆಯವರೆಗೆ ತರಗತಿಗಳು ನಡೆಯುತ್ತಿದೆ. ಆಸಕ್ತ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು 9900109490, 08251237143 ಗೆ ಸಂಪರ್ಕಿಸಿ ತರಗತಿಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು