Recent Posts

Monday, January 20, 2025
ಪುತ್ತೂರು

ಅಂಬಿಕಾದಲ್ಲಿ ‘ಪರಾಕ್ರಮ್ ದಿವಸ್’ಆಚರಣೆ-ಕಹಳೆ ನ್ಯೂಸ್

ದೇಶಕ್ಕಾಗಿ ತನ್ನೆಲ್ಲಾ ಸುಖ ಸಂತೋಷಗಳನ್ನು ತ್ಯಾಗ ಮಾಡಿದ ಮಹಾನ್ ನಾಯಕ ನೇತಾಜಿ ಸುಭಾಶ್ಚಂದ್ರ ಬೋಸ್ರವರ ನೂರ ಇಪ್ಪತ್ತೈದನೇ ಜನ್ಮದಿನವನ್ನು ಕೇಂದ್ರ ಸರಕಾರ ‘ಪರಾಕ್ರಮ್ ದಿವಸ್’ ಎಂಬುದಾಗಿ ಘೋಷಿಸಿದೆ. ನಿಜವಾಗಿಯೂ ನೇತಾಜಿಯವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದು ಅಂಬಿಕಾದಲ್ಲಿ ನಡೆದ ನೇತಾಜಿ ಸುಭಾಶ್ಚಂದ್ರ ಬೋಸರ ನೂರ ಇಪ್ಪತ್ತೈದನೇ ಜನ್ಮ ದಿನ ಆಚರಣೆಯ ಮುಖ್ಯ ಅಥಿತಿ ಕರ್ನಲ್ ಜಿ.ಡಿ.ಭಟ್ ಅವರು ನೇತಾಜಿಯವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಗೈದು ಮಹಾನ್ ನಾಯಕನನ್ನು ಸ್ಮರಿಸಿ ಗೌರವಿಸಿದರು ಹಾಗೂ ಮಹಾನ್ ನಾಯಕನನ್ನು ಎಲ್ಲರೂ ಅನುಕರಿಸಿ ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಯ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ನಟ್ಟೋಜರು ಮಾತನಾಡುತ್ತಾ ‘ತನ್ನ ನಿನ್ನೆಗಳನ್ನು ದೇಶಕ್ಕಾಗಿ ತ್ಯಾಗ ಮಾಡಿದ ಯೋಧರಿಗೆ ಗೌರವ ಕೊಟ್ಟಾಗ ದೇಶ ಪ್ರಗತಿ ಪಥದಲ್ಲಿ ಸಾಗುತ್ತದೆ. ‘ಅಮರ್ ಜವನ್ ಜ್ಯೋತಿ’ಯನ್ನು ಅಂಬಿಕಾ ಸಂಸ್ಥೆ ಯೋಧರಿಗಾಗಿ ನಿರ್ಮಿಸಿದೆ. ದೇಶಕ್ಕಾಗಿ ಜ್ಞಾನಾರ್ಜನೆ ಮಾಡಿ ದೇಶ ಸೇವೆ ಮಾಡಿ’ ಎಂದು ವಿದ್ಯಾರ್ಥಿಗಳಲ್ಲಿ ದೇಶ ಸೇವೆಯ ಮಹತ್ವವನ್ನು ತಿಳಿಸಿದರು. ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಗಳಿಸಿಕೊಳ್ಳಲು ನೇತಾಜಿಯವರು ಹೇಳಿದ ಶಕ್ತಿಯುತ ಮಾತುಗಳನ್ನು ಸಂಸ್ಥೆಯ ನಿರ್ದೇಶಕ ಸುರೇಶ್ ಶೆಟ್ಟಿಯವರು ನೆನಪಿಸುತ್ತಾ ಮಹಾನ್ ನಾಯಕನ ಬಗ್ಗೆ ಹೆಮ್ಮೆಯನ್ನು ವ್ಯಕ್ತ ಪಡಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ರಾಜಶ್ರೀ ಎಸ್ ನಟ್ಟೋಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು