Recent Posts

Monday, January 20, 2025
ಪುತ್ತೂರು

ದೇಶ ಸೇವೆಯ ಅವಕಾಶ ಸಿಗುವುದೇ ಒಂದು ಅದೃಷ್ಟ: ಎಸ್. ಜಿ. ಟಿ. ಶ್ರೀವತ್ಸಾ-ಕಹಳೆ ನ್ಯೂಸ್

ಪುತ್ತೂರು ಜ. ೨೨: ಎಲ್ಲಾ ಕ್ಷೇತ್ರದಲ್ಲಿಯೂ ಶಿಸ್ತಿನ ಅಗತ್ಯವಿದೆ. ಅದರಲ್ಲೂ ಎನ್.ಸಿ.ಸಿ. ಕೆಡೆಟ್ಗಳಿಗೆ ಶಿಸ್ತುವಿನೊಂದಿಗೆ ಕೆಲಸದಲ್ಲಿ ನಂಬಿಕೆ ಕೂಡ ಸಹಜವಾಗಿಯೇ ಇರಬೇಕು. ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಸುಲಭದ ಕಾರ್ಯವಲ್ಲ. ಎಲ್ಲರು ಒಗ್ಗಟ್ಟಿನಲ್ಲಿ ಪರಿಶ್ರಮ ವಹಿಸಿದರೆ ಮಾತ್ರ ದೇಶಪ್ರೇಮದ ಮನೋಭಾವ ಎದ್ದು ಕಾಣಿಸುವುದು ಮತ್ತು ಪ್ರತಿಫಲ ಸಿಗುವುದು. ಹಿರಿಯರಿಗೆ ಪ್ರಥಮವಾಗಿ ಗೌರವ ನೀಡುವುದನ್ನು ಕಲಿಯಬೇಕು. ಜೊತೆಗೆ ನಮಗೆ ತಿಳಿಯದ ವಿಷಯವನ್ನು ಅವರಿಂದ ಅರಿತುಕೊಳ್ಳಲು ಪ್ರಯತ್ನಿಸಬೇಕು ಎಂದು ಭಾರತೀಯ ವಾಯುಪಡೆಯ ಎಸ್.ಜಿ.ಟಿ. ಶ್ರೀವತ್ಸಾ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಎನ್.ಸಿ.ಸಿ. ಘಟಕದ ಆಶ್ರಯದಲ್ಲಿ ಆಯೋಜಿಸಿದ ಮಾಹಿತಿ ಕಾರ್ಯಗಾರದಲ್ಲಿ ಎನ್.ಸಿ.ಸಿ. ಕೆಡೆಟ್ಗಳನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು. ಭಾರತೀಯ ವಾಯುಸೇನೆಗೆ ಸೇರುವುದು ಹೇಗೆ ಎಂಬ ಕುರಿತಾಗಿ ಪ್ರೇರಣಾತ್ಮಕ ಮಾತುಗಳನ್ನಾಡಿದ ಅವರು, ನಮ್ಮ ದೇಶದಲ್ಲಿ ತ್ಯಾಗ ಮತ್ತು ಸೇವೆ ಪವಿತ್ರ ಸ್ಥಾನವನ್ನು ಪಡೆದಿದೆ. ದೇಶಾಭಿಮಾನ ಎಲ್ಲರಲ್ಲಿ ಇರುತ್ತದೆ. ಆದರೆ ದೇಶ ಸೇವೆಯ ಅವಕಾಶ ಅದೃಷ್ಟವಂತರಿಗೆ ಮಾತ್ರ ಸಿಗುವುದು. ಸಿಕ್ಕಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಸೇನೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಜ್ಞಾನದೊಂದಿಗೆ ಅವರ ಕ್ಷೇತ್ರದಲ್ಲಿ ಹೆಚ್ಚಿನ ಪ್ರೀತಿ ಹಾಗು ಆಸಕ್ತಿ ಇರಬೇಕು. ಸಕಾರಾತ್ಮಕ ಆಲೋಚನೆಯ ಜೊತೆಗೆ ಶ್ರದ್ದೆಯೂ ಇದ್ದರೆ ಗುರಿಯನ್ನು ಸುಲಭವಾಗಿ ತಲುಪಲು ಸಾಧ್ಯ. ನಮ್ಮ ತಯಾರಿ ಉತ್ತಮವಾಗಿದ್ದರೆ ಜಯ ನಮ್ಮದೆ. ಮಾತೃ ಭೂಮಿಗಾಗಿ ನಾನು ಕೂಡ ಸೇವೆ ಸಲ್ಲಿಸಬೇಕು ಅನ್ನುವ ತುಡಿತ ನಮ್ಮಲ್ಲಿರಬೇಕು ಎಂದು ಹೇಳಿದರು. ಎನ್.ಸಿ.ಸಿ ಕೆಡೆಟ್ ಯಶಸ್ವಿನಿ ಕಿಣಿ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿನಿಯರಾದ ನೇಹ, ಸಮನ್ವಿ, ಶಮಾ ಪ್ರಾರ್ಥಿಸಿದರು. ಉಪನ್ಯಾಸಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರವಿಚಂದ್ರ ಸಹಕರಿಸಿದರು

ಜಾಹೀರಾತು
ಜಾಹೀರಾತು
ಜಾಹೀರಾತು