Recent Posts

Monday, January 20, 2025
ಬೆಳ್ತಂಗಡಿ

ನಿಧಿ ಸಮರ್ಪಣಾ ಅಭಿಯಾನದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿ ಭಾಗಿ-ಕಹಳೆ ನ್ಯೂಸ್

ಕಾವೂರು: ದೇಶದಲ್ಲೆಡೆ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿದ್ದು, ಭಗವಂತ ಶ್ರೀ ರಾಮಚಂದ್ರನ ಜನ್ಮಸ್ಥಾನವಾಗಿರುವ ಅಯೋಧ್ಯೆಯನ್ನು ಕಣ್ತುಂಬಿಕೊಳ್ಳಲು ದೇಶದ ಜನರು ಕಾತುರರಾಗಿದ್ದರೆ.

ಪರಿವಾರದ ಕಾರ್ಯಕರ್ತರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರ ಮಾರ್ಗದರ್ಶನದಂತೆ ನಿಧಿ ಸಮರ್ಪಣಾ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ. ಆದಿತ್ಯವಾರ ಪಚ್ಚನಾಡಿ,ಕಾವೂರು ಭಾಗದ ವಿವಿಧ ಕಡೆ ಮನೆಮನೆಗಳಿಗೆ ತೆರಳಿ ನಿಧಿ ಸಮರ್ಪಣಾ ಅಭಿಯಾನದಲ್ಲಿ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಭಾಗಿಯಾಗಿದ್ದರು. ಶಾಸಕರ ಜೊತೆಗೆ ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಸ್ಥಳೀಯ ಕಾರ್ಪೊರೇಟರ್ ಗಳಾದ ಸಂಗೀತಾ ಆರ್ ನಾಯಕ್, ಸುಮಂಗಲಾ ರಾವ್, ಪ್ರಮುಖರಾದ ಪ್ರಶಾಂತ್ ಪೈ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು